ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದದಲ್ಲಿ ಭಾನುವಾರ ಬೆಳಿಗಿನ ಜಾವದಲ್ಲಿ ಮಗುವೊಂದು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಪರಿಣಾಮ ಮೃತಪಟ್ಟಿರುವ ಘಟನೆ ಜರುಗಿದೆ.
ಗ್ರಾಮದ ರಂಗಸ್ವಾಮಿ- ಲಕ್ಷ್ಮಿ ದಂಪತಿಯ 11 ತಿಂಗಳ ಪುತ್ರ ಗಗನ್ ಭಾನುವಾರ ಎಂದಿನಂತೆ ತಮ್ಮನ ಮನೆಯವರ ಜೊತೆ ಆಟವಾಡಿದ್ದಾನೆ.
ನಂತರ ಸ್ನಾನ ಮಾಡಿಸಿ ಮನೆಯಲ್ಲಿ ಪೋಷಕರು ಮಲಗಿಸಿದ್ದಾರೆ. ನಂತರ ಎಚ್ಚರಗೊಂಡಾಗ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದೆ. ಮಗು ಕಿರುಚುವುದನ್ನು ಗಮನಿಸಿದ ಮಗುವಿನ ಚಿಕ್ಕಮ್ಮ ಮಗುವನ್ನು ಬಿಡಿಸಲು ತೆರಳಿದಾಗ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.
ಇಬ್ಬರನ್ನು ತಕ್ಷಣ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಕೊಂಡು ಹೋಗಿದ್ದಾರೆ. ಆದರೆ ಮಗು ಮೃತಪಟ್ಟಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.