News Karnataka Kannada
Monday, April 29 2024
ಚಾಮರಾಜನಗರ

ಮರಡಿಗುಡ್ಡ ವೃಕ್ಷವನದಲ್ಲಿ ಶುರುವಾಯ್ತು ಸಾಹಸಕ್ರೀಡೆ

New Project 2021 08 17t025243.742
Photo Credit :

ಚಾಮರಾಜನಗರ : ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ನಿಸರ್ಗದ ನಡುವೆ ನಲಿದಾಡಿ ಸಾಹಸ ಮಾಡುವ ಸಾಹಸಪ್ರಿಯರಿಗಾಗಿಯೇ ಜಿಪ್ ಲೈನ್ ಸಾಹಸ ಕ್ರೀಡೆಯನ್ನು ಕೊಳ್ಳೇಗಾಲದ ಮರಡಿಗುಡ್ಡ ವೃಕ್ಷ ವನದಲ್ಲಿ ಆರಂಭಿಸಲಾಗಿದೆ.

ಹಾಗೆನೋಡಿದರೆ ಮರಡಿಗುಡ್ಡ ವೃಕ್ಷ ವನವು ಬೆಟ್ಟಗುಡ್ಡಗಳನ್ನೊಳಗೊಂಡ ಹಸಿರು ಹಚ್ಚಡದಿಂದ ಕೂಡಿದ್ದು ನಿಸರ್ಗ ಪ್ರಿಯರಿಗೆ ಮುದನೀಡುತ್ತದೆ. ಇಂತಹ ಸುಂದರ ಪರಿಸರದಲ್ಲಿ ಒಂದೆಡೆಯಿಂದ ಮತ್ತೊಂದೆಡೆ ತಂತಿಯಲ್ಲಿ ಸಾಗುವ ಮೈನವಿರೇಳಿಸುವ, ಸಾಹಸಮಯ ಕ್ರೀಡೆಯಾದ ಜಿಪ್ ಲೈನ್ ವರದಾನವಾಗಿದೆ.

ಮರಡಿಗುಡ್ಡ ವೃಕ್ಷ ವನದ ಬೆಟ್ಟ-ಗುಡ್ಡದ ನಡುವೆ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತಂತಿಯನ್ನು ಅಳವಡಿಸಲಾಗಿದ್ದು, ಇದರಲ್ಲಿ  ಈ ತಂತಿ ಮೇಲೆ ಕೈಯಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ಕೊಂಡು ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾ ಮುಂದೆ ಸಾಗುವುದು ಸಾಹಸಪ್ರಿಯರಿಗೊಂದು ಹೊಸ ಅನುಭವ ಎಂದರೆ ತಪ್ಪಾಗಲಾರದು. ಇನ್ನು ಇಲ್ಲಿ ನುರಿತ ತರಬೇತಿದಾರರಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿರುವುದರಿಂದ ಸಾಹಸಪ್ರಿಯರು ಯಾವುದೇ ಭಯವಿಲ್ಲದೆ ಭಾಗವಹಿಸಬಹುದಾಗಿದೆ.

ಜಿಪ್ ಲೈನ್  ಸಾಹಸಕ್ಕಿಳಿಯುವ ಸಾಹಸಿಗರಿಗೆ ಅತ್ಯಾಧುನಿಕ 4ಜಿ   ಗೋಪ್ರೋ ಕ್ಯಾಮರಾ ಸೆಲ್ಫಿ ಸ್ಟಿಕ್ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಪ್ರವಾಸಿಗರು  ತಂತಿ ಮೂಲಕ ತೇಲುತ್ತಾ ಸಾಗುವ ಕ್ಷಣವನ್ನು ಸಾಕ್ಷಿಯಾಗಿಸಿ ಕೊಳ್ಳಬಹುದಾಗಿದೆ. ಈಗಾಗಲೇ ಹಲವು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಿಪ್ ಲೈನ್  ಸಾಹಸದ ಅನುಭವ ಪಡೆದಿದ್ದಾರೆ. ಈ ಜಿಪ್ ಲೈನ್  ಸಾಹಸಕ್ರೀಡೆಯನ್ನು ಅರಣ್ಯ ಇಲಾಖೆಯು ಸುಮಾರು ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಆರಂಭಿಸಲಾಗಿದೆ.

ಸದ್ಯ ಜಿಪ್ ಲೈನ್ ಕ್ರೀಡೆಯತ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದು, ಇದರ ಮಜಾ ಸವಿಯಲೆಂದೇ ಬರುತ್ತಿದ್ದಾರೆ. ಈಗಾಗಲೇ ಮಳೆಯಿಂದ ಮಿಂದೆದ್ದಿರುವ ಹಸಿರ ಸ್ವರ್ಗ ಸಾಹಸ ಕ್ರೀಡೆಗೆ ಬರುವವರಿಗೆ ಉಲ್ಲಾಸ ತುಂಬುತ್ತಿದೆ. ಒಂದಷ್ಟು ಮಂದಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮತ್ತೊಂದಷ್ಟು ಮಂದಿ ಬೆಟ್ಟದ ತಪ್ಪಲಿನಲ್ಲಿ ಹಾಗೂ ದೂರದ ದೊಡ್ಡ ಮನೆ ಮಹಡಿಗಳ ಮೇಲೆ ನಿಂತು  ನೋಡಿ ಖುಷಿಪಡುತ್ತಿದ್ದಾರೆ.

ಈ ಕುರಿತಂತೆ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಏಡುಕೊಂಡಲು  ಮಾತನಾಡಿ,  ಜಿಲ್ಲೆಯ ಸುತ್ತ ಮುತ್ತಲ ಜನರು ಹಾಗೂ  ವಿವಿಧ ಕಡೆಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಾಹಸವನ್ನೊಳಗೊಂಡ ಮನರಂಜನೆ ನೀಡುವ ಉದ್ಧೇಶದಿಂದ ಜಿಪ್ ಲೈನ್ ಪ್ರಾರಂಭಿಸಿದ್ದಾಗಿ ಹೇಳಿದ್ದಾರೆ.

ಈಗ ಲಾಕ್ ಡೌನ್ ಆಗಿರುವುದರಿಂದ ಪ್ರವಾಸಿಗರ ಆಗಮನ ಕಡಿಮೆಯಾಗಿದ್ದರೂ ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾಗುವ ಸಾಧ್ಯತೆಯಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು