ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಿಂದ ಓಂ ಶಕ್ತಿಗೆ ತೆರಳಿ ವಾಪಸ್ ಆದ 8 ಮಂದಿಗೆ ಕೊರೊನಾ ಪಾಸಿಟವ್ ಧೃಡಪಟ್ಟಿದೆ.ಓಂ ಶಕ್ತಿಗೆ ಬಸ್ ನಲ್ಲಿ ತೆರಳಿದ್ದ 63 ಮಂದಿ ಬುಧವಾರ ಬೆಳಗಿನ ಜಾವ ಗ್ರಾಮಕ್ಕೆ ವಾಪಸ್ ಆಗಿದ್ದಾರೆ.
ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ,ಎಲ್ಲರನ್ನು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ನಡೆಸಿದ ವೇಳೆ 8 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಉಳಿದವರ ಪರೀಕ್ಷೆ ಮಾದರಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. ಇದರ ವರದಿ ನಾಳೆ (ಗುರುವಾರ) ಬರಲಿದೆ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂದೀಪ್ ಕುಮಾರ್, ಡಾ.ಹೇಮಾ ಮೂರ್ತಿ ಮಾರ್ಗದರ್ಶನದಲ್ಲಿ ಆರೋಗ್ಯಾಧಿಕಾರಿ ಯತೀಶ್, ರವಿಕುಮಾರ್, ಲೀಲಾವತಿ, ಮಂಜುಳ, ವಿಜಯ, ಶುಶ್ರೂಷಕಿ ಅರುಣಾಕ್ಷಿ, ನಾಗೇಂದ್ರ ಸೇರಿದಂತೆ ಇತರರು ಕೊರೊನಾ ಪರೀಕ್ಷೆ ನಡೆಸಿದ್ದಾರೆ.