ತಿ. ನರಸೀಪುರ: ಪಟ್ಟಣದ ತಿರುಮಕೂಡಲು ಸರ್ಕಲ್ ನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ನಡೆಯಿತು. ಪಟ್ಟಣದ ತಿರುಮಕೂಡಲು ನಿವಾಸಿಗರಿಂದ ಆಚರಣೆ ಮಾಡಲಾಯಿತು.
ಮುಖಂಡರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಸಮಾಜ ಸೇವಕ ಮಣಿಕಂಠರಾಜ್ ಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯ ಚೇತನ್, ಶ್ರೀನಿವಾಸ್,ರವಿ ಯಜಮಾನ್ ಚಂದ್ರೇಗೌಡರು ಸೇರಿದಂತೆ ಇತರರು ಇದ್ದರು.

