ಮೈಸೂರು: ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು 10 ಕೆಜಿ ಗಾಂಜಾ ಹಾಗೂ ಒಂದು ಕಾರನ್ನ ವಶಪಡಿಸಿಕೊಳ್ಳಲಾಗಿದೆ. ಮಂಜುನಾಥ್ @ ತೋಟಿ ಮಂಜು,ಮಂಜುನಾಥ್ @ ಕುಂಟ ಮಂಜ ಹಾಗೂ ಕಾರ್ತಿಕ್ @ ಅಪ್ಪಾಜಿ ಬಂಧಿತರು.

ವಿಮುಕ್ತಿ ಅಭಿಯಾನದಡಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 5.05 ಲಕ್ಷ ಮೌಲ್ಯದ 10ಕೆಜಿ 90 ಗ್ರಾಂ ನಿಷೇಧಿತ ಗಾಂಜಾ ಹಾಗೂ 5 ಲಕ್ಷ ಮೌಲ್ಯದ ಒಂದು ಕಾರ್ ವಶಪಡಿಸಿಕೊಂಡಿದ್ದಾರೆ. ಮಂಜುನಾಥ್ @ ತೋಟಿ ಮಂಜ ವಿರುದ್ದ ಈಗಾಗಲೇ ಎರಡು ಮಾದಕ ವಸ್ತು ನಿಷೇಧ ಕಾಯ್ದೆ ಪ್ರಕರಣ ಇರುತ್ತದೆ.

ಮಂಜುನಾಥ್ @ ಕುಂಟ ಮಂಜ ಮೇಲೆ ಒಂದು ಪ್ರಕರಣ ದಾಖಲಾಗಿದೆ. ಇಬ್ಬರೂ ಜೈಲು ಶಿಕ್ಷೆ ಅನುಭವಿಸಿ ಜಾಮೀನು ಮೇಲೆ ಬಿಡುಗಡೆ ಹೊಂದಿ ನಂತರ ಮತ್ತೆ ತಮ್ಮ ಹಳೆ ಚಾಳಿ ಮುಂದುವರೆಸಿ ಸಿಕ್ಕಿಬಿದ್ದಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ರವರಾದ ಹರ್ಷ ಪ್ರಿಯಂವದಾ, ಸುಂದರರಾಜ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಮಹಮದ್ ಷರೀಫ್ ರಾವತರ್ ಇ‌ನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಪಿಎಸ್ಸೈ ಲೇಪಾಕ್ಷ,ಸಿಬ್ಬಂದಿಗಳಾದ ಮಧುಕುಮಾರ್, ಚೇತನ್, ಆದಂ, ಸಂತೋಷ್ ಪವಾರ್, ದೇವರಾಜ, ರಾಜಾಸಾಬ್, ಸಮೀರ್, ಹಜರತ್ ಆಲಿ ನಾಯ್ಕರ್, ಯಶವಂತ್ ಕುಮಾರ್, ಸಿದ್ದರಾಜು ರವರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.