ಗುಂಡ್ಲುಪೇಟೆ : ಬಿಡಾಡಿ ದನಗಳ ಹಾವಳಿಗೆ ವಾಹನ ಸವಾರರು ಬಳಲಿ ಬೆಂಡಾಗಿದ್ದರು. ಸದ್ಯ, ದನಗಳ ಹಾವಳಿಗೆ ಗುಂಡ್ಲುಪೇಟೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ಸೋಮವಾರದಂದು ಪುರಸಭೆ ಮುಖ್ಯಾಧಿಕಾರಿ ಶರವಣ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾಡುತ್ತಿದ್ದ 11 ದನಗಳನ್ನು ಸೆರೆ ಹಿಡಿಯಲಾಯಿತು.
ಸಾಕಷ್ಟು ಬಾರಿ ಮನವಿ ಮಾಡಿದದ್ದರೂ, ಎಚ್ಚರಿಸಿದ್ದರೂ ಹಸುಗಳ ಮಾಲೀಕರು ಮೌನವಾಗಿದ್ದರಿಂದ ಪುರಸಭೆಯು ಗಂಭೀರವಾಗಿ ಪರಿಗಣಿಸಿ ದನಗಳನ್ನು ಸೆರೆ ಹಿಡಿಯಲಾಯಿತು. ಸೆರೆ ಹಿಡಿದ ದನಗಳನ್ನು ಮೈಸೂರಿನ ಪಿಂಜಾರಪೋಲಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ.

