ಮೈಸೂರು : ಬೇಕರಿಯ ಬೀಗ ಮುರಿದು ನಗದು ಕಳ್ಳತನವಾಗಿರುವ ಘಟನೆ ಮೈಸೂರು ಜಿಲ್ಲೆಯ ಇಲವಾಲ ಹೋಬಳಿಯ ಗುಂಗ್ರಾಲ್ ಛತ್ರ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.

ಬೇಕರಿಯಲ್ಲಿದ್ದ 20 ಸಾವಿರ ರೂಯನ್ನು ಕಳ್ಳರು ಕದ್ದೊಯ್ದರು.  ಮುಖ್ಯರಸ್ತೆ ಪಕ್ಕದಲ್ಲಿ ಇರುವ ಪುನೀತ್ ಮಾಲೀಕತ್ವದ SL ಆಯ್ಯಾಂಗಾರ್ ಬೇಕರಿಯಾಗಿದ್ದು, ಇಲವಾಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಹಿಂದೆ ಇಲವಾಲ ವ್ಯಾಪ್ತಿಯಲ್ಲೇ ಸರಣಿ ಕಳ್ಳತನ ನಡೆದಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೆಗೌಡ ಹುಟ್ಟೂರು ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಕಳ್ಳರ ಕೈಚಳಕ ನಡೆದಿದೆ. ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.