ಮೈಸೂರು : ಕಾರ್ ರೇಸ್ ವೇಳೆ ಭೀಕರ ಅಪಘಾತ ಸಂಭವಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಳಿಮಾವು ಬಳಿ ನಡೆದಿದೆ. ಡ್ರೈವರ್ ಗೆ ಗಂಭೀರ ಗಾಯಗಳಾಗಿದೆ.

ಹುಳಿಮಾವು ಸಮೀಪದ ಫಿಲ್ಮಿ ಸಿಟಿ ಬಳಿ ಆಯೋಜಿಸಿದ ಕಾರು ರೇಸ್ ನಲ್ಲಿ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿದೆ. ಖಾಸಗಿ ಸಂಸ್ಥೆಯೊಂದು ಕಾರು ರೇಸ್ ಆಯೋಜನೆ ಮಾಡಿತ್ತು. ರೇಸ್ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಪ್ರಜ್ವಲ್ ಕೈಗೆ ಗಂಭೀರವಾದ ಗಾಯವಾಗಿದೆ.

ವೇಗವಾಗಿ ಚಲಾವಣೆ ಆಗ್ತಿದ್ದ ಕಾರು ನಿಯಂತ್ರಣ ತಪ್ಪಿದೆ. ಡ್ರೈವಿಂಗ್ ಸೀಟ್ನಲ್ಲಿದ್ದ ಪ್ರಜ್ವಲ್ ಮೇಲೆ ಕಾರು ಮೂರು ಸುತ್ತು ಪಲ್ಟಿಯಾಗಿದೆ. ಪಕ್ಕದಲ್ಲೇ ಇದ್ದ ಇತರೆ ಕಾರಿಗೂ ಹಾನಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆಯೋಜಕರ ವಿಚಾರಣೆ ಕೂಡ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.