ಮೈಸೂರು : ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ದುರಂತ ಹಿನ್ನೆಲೆ ರಾಜ್ಯಾದ್ಯಂತ ಗೃಹ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಸೆಕ್ಯುರಿಟಿ ಚೆಕ್ ಹೆಚ್ಚಾಗಿದೆ. ಕೇಂದ್ರಿಯ ರೈಲ್ವೆ ನಿಲ್ದಾಣದಲ್ಲಿ ಟೈಟ್ ಸೆಕ್ಯುರಿಟಿ ಇದೆ.

ಪ್ರಯಾಣಿಕರು, ಅವರ ವಸ್ತುಗಳ ಮೇಲೆ ಸಂಪೂರ್ಣ ನಿಗಾವಹಿಸಿ, ಲಗೇಜ್‌ಗಳನ್ನು ಪೊಲೀಸರು ಚೆಕ್ ಮಾಡುತ್ತಿದ್ದಾರೆ. ರೈಲ್ವೆ ನಿಲ್ದಾಣದ ಹೊರಗೆ ಹಾಗೂ ಪ್ಲಾಟ್ ಫಾರ್ಮ್‌ಗಳಲ್ಲಿ ತಪಾಸಣೆ ನಡೆಯುತ್ತಿದೆ. ರೈಲ್ವೆ ನಿಲ್ದಾಣದ ಜೊತೆಗೆ ಕೇಂದ್ರಿಯ ಬಸ್ ನಿಲ್ದಾಣದಲ್ಲೂ ಸೆಕ್ಯುರಿಟಿಯನ್ನು ಪೊಲೀಸರು ಬಿಗಿಗೊಳಿಸಿದ್ದಾರೆ.

