ಮೈಸೂರು: ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಕೇಕ್ ತಯಾರಿ ಕುರಿತ ಕಾರ್ಯಾಗಾರವನ್ನ ನೇಗಿಲಯೋಗಿ ಸೇವಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೇಕ್ ಬೇಕಿಂಗ್ ಕ್ಲಾಸ್‌ಗೆ ಅಪಾರ ಸಂಖ್ಯೆಯಲ್ಲಿ ಬಂದ ನಾಗರೀಕರು ಸದುಪಯೋಗಪಡಿಸಿಕೊಂಡರು. ಕಾರ್ಯಾಗಾರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತು. ಪ್ರಸಿದ್ಧ ಬೇಕರ್ ಶಿಲ್ಪಾ ಅವರ ಮಾರ್ಗದರ್ಶನದಲ್ಲಿ ವಿವಿಧ ಬೇಕಿಂಗ್ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ಬ್ರೌನೀಸ್, ಮಿಲ್ಕ್ ಕೇಕ್, ರೆಡ್ ವೆಲ್ವೆಟ್ ಕಪ್ ಕೇಕ್‌ ಸೇರಿದಂತೆ ಅನೇಕ ಕೇಕುಗಳ ತಯಾರಿ ಕುರಿತಾಗಿ ಪ್ರಾತ್ಯಕ್ಷಿಕೆ ಮೂಲ ಪ್ರದರ್ಶಿಸಲಾಯಿತು. ಮಿಶ್ರಣದ ಸರಿಯಾದ ಪ್ರಮಾಣ, ಬೇಯಿಸುವ ತಾಪಮಾನ ಮತ್ತು ಅಲಂಕರಣ ತಂತ್ರಗಳ ಬಗ್ಗೆ ಸವಿಸ್ತಾರವಾದ ತಿಳುವಳಿಕೆಯನ್ನು ನೀಡಿದರು. ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷರಾದ  ಶೋಭಾ ಜೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.