ತಿ. ನರಸೀಪುರ: ಬುದ್ಧ, ಜಗಜ್ಯೋತಿ ಶ್ರೀ ಬಸವೇಶ್ವರ, ಡಾ.ಬಿ.ಆರ್ ಅಂಬೇಡ್ಕರ್ ಮೂವರು ಮಹನೀಯರ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ನಡೆಯಿತು.

ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಯ ಸಹಭಾಗಿತ್ವದಲ್ಲಿ ಸಭೆ ನಡೆಸಲಾಯಿತು. ಮುಖಂಡರುಗಳು ಮಾತನಾಡಿ ಬುದ್ಧ ಬಸವ ಮತ್ತು ಅಂಬೇಡ್ಕರ್ ರವರು ಸಮಾನತೆ ಸಾರಿದ ಮಹನೀಯರು. ಇಂತಹ ಮಹನೀಯರ ಜಯಂತಿಯನ್ನು ಎಲ್ಲರೂ ಒಟ್ಟಾಗಿ ಆಚರಿಸುವುದು ತುಂಬಾ ಸಂತೋಷದ ವಿಚಾರ ಇಂತಹ ಮಹನೀಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.

ಈ ಸಂದರ್ಭ ಈ ಸಂದರ್ಭ ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರುಗಳಾದ ಕಿರುಗಸೂರು ಶಂಕರ್, ಕರೋಹಟ್ಟಿ ಕುಮಾರಸ್ವಾಮಿ, ಕೆಬ್ಬೆಹುಂಡಿ ಶಿವಕುಮಾರ್, ಸಿದ್ದಲಿಂಗ ಮೂರ್ತಿ ಸೇರಿದಂತೆ ಮತ್ತು ಇತರರು ಇದ್ದರು.