ಮೈಸೂರು: ಕಾಶಿಗಿಂತಲೂ ಗುಲಗಂಜಿಯಷ್ಟು ಪವಿತ್ರ ಕ್ಷೇತ್ರ ತಿ.ನರಸೀಪುರದ ಗುಂಜಾನರಸಿಂಹ ಸ್ವಾಮಿ ದೇಗುಲ. ಇಲ್ಲಿ ಇಂದು ವಿಜೃಂಭಣೆಯಿಂದ ಶ್ರೀ ಗುಂಜಾನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು.

ಇಂದು ಮುಂಜಾನೆಯಿಂದಲೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಗುಂಜಾ ನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಗೆ ಮಾಡಿ ಬಳಿಕ ಮಂಟಪ ಪೂಜೆ ಮಾಡಿ ಮೀನ ಶುದ್ಧ ಪೌರ್ಣಮಿಯ ಅಭಿಜಿನ್ ಮುಹೂರ್ತದಲ್ಲಿ ಸಿಂಗಾರಗೊಂಡ ರಥದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿಲಾಯಿತು ರಥೋತ್ಸವಕ್ಕೆ ತಹಶಿಲ್ದಾರ್ ಟಿ.ಜಿ ಸುರೇಶಚಾರ್ ಚಾಲನೆ ನೀಡಿದರು.

ನೆರೆದಿದ್ದ ಸಹಸ್ರಾರು ಭಕ್ತರು ಹರ್ಷೋದ್ಗರದಿಂದ ರಥ ಎಳೆದು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು ಅಲ್ಲಲ್ಲಿ ಹರಕೆ ಹೊತ್ತವರು ಮಜ್ಜಿಗೆ, ಪಾನಕ ಹಂಚಿ ಭಕ್ತರ ಬೇಗೆ ತಣಿಸಿವುದು ಸಾಮಾನ್ಯವಾಗಿತ್ತು ಇನ್ನು ಯುವ ಸಮೂಹವಂತೂ ತೇರು ಎಳೆಯುವುದರೊಂದಿಗೆ ಬಣ್ಣದ ಒಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.