ಮೈಸೂರು: ಮದುವೆ ಆಗಲು ನಿರಾಕರಿಸಿದ ಯುವತಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡ ಪ್ರಿಯಕರ ಬ್ಲಾಕ್ ಮೇಲ್ ಮಾಡಿ ಮನೆಗೆ ನುಗ್ಗಿ ಪೀಠೋಪಕರಣಗಳನ್ನ ಧ್ವಂಸಗೊಳಿಸಿ ದಾಂಧಲೆ ಮಾಡಿದ ಪ್ರಕರಣ ಎನ್.ಆರ್.ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರನ ವಿರುದ್ದ ನೊಂದ ಯುವತಿ ಪ್ರಕರಣ ದಾಖಲಿಸಿದ್ದಾಳೆ. ತೇಜಸ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ನೊಂದ ಯುವತಿ ಹಾಗೂ ತೇಜಸ್ 10 ನೇ ತರಗತಿಯಿಂದ ಕ್ಲಾಸ್ ಮೇಟ್ಸ್. ಕಾಲೇಜ್ ಮೆಟ್ಟಿಲು ಹತ್ತಿದಾಗ ಇಬ್ಬರ ನಡುವೆ ಲವ್ ಶುರುವಾಗಿದೆ.ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ತೇಜಸ್ ಕ್ಯಾರೆಕ್ಟರ್ ಸರಿ ಇಲ್ಲ ಎಂಬ ಮಾಹಿತಿ ಮನೆಯವರಿಗೆ ಗೊತ್ತಾಗಿದೆ. ಆದರೂ ತೇಜಸ್ ನೇ ಮದುವೆ ಆಗುವುದಾಗಿ ಪಟ್ಟು ಹಿಡಿದ ಯುವತಿ ಮನೆಯವರನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಈ ವೇಳೆ ಎರಡೂ ಮನೆಯವರು ಕುಳಿತು ಮಾತುಕತೆ ಆಡಿ ನಿಶ್ಚಯ ಮಾಡಿಕೊಂಡಿದ್ದಾರೆ. ನಂತರ ಲವರ್ಸ್ ಸಿನಿಮಾ,ಪಾರ್ಕ್,ಹೋಟೆಲ್ ಗಳನ್ನ ಸುತ್ತಿದ್ದಾರೆ. ಈ ಮಧ್ಯೆ ವಿಧ್ಯಾಭ್ಯಾಸ ಮುಗಿಸಿದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದಾಳೆ. ಕಂಪನಿಗೆ ಬಂದ ತೇಜಸ್ ನನ್ನ ಹೆಂಡತಿ ಎಂದು ಹೇಳಿಕೊಂಡು ಯುವತಿಯ ಕೊಲೀಗ್ ಗಳನ್ನ ಪರಿಚಯಿಸಿಕೊಂಡಿದ್ದಾನೆ.
ಕೆಲಸದ ಒತ್ತಡದಲ್ಲಿ ತೇಜಸ್ ಜೊತೆ ಮಾತನಾಡುವುದು ಯುವತಿಗೆ ಸಾಧ್ಯವಾಗಿಲ್ಲ. ಹೀಗಾಗಿ ತೇಜಸ್ ಅನುಮಾನಗೊಂಡು ಬೇರೆ ಯಾರನ್ನಾದ್ರೂ ಮದುವೆ ಆಗ್ತೀಯ ಅಂತ ಪ್ರಶ್ನಿಸುತ್ತಾ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಈತನ ಕಿರುಕುಳಕ್ಕೆ ಬೇಸತ್ತ ಯುವತಿ ತೇಜಸ್ ನಿಂದ ದೂರ ಆಗಲು ಯತ್ನಿಸಿದ್ದಾಳೆ. ನನ್ನನ್ನೇ ಮದುವೆ ಆಗುವಂತೆ ಪಟ್ಟು ಹಿಡಿದು ಕಂಪನಿ ಬಳಿ ಬಂದು ಕಿರುಕುಳ ನೀಡಿದ್ದಾನೆ.
ಮದುವೆ ಆಗದಿದ್ದರೆ ನಿನ್ನ ಅಣ್ಣ,ಅತ್ತಿಗೆ,ಮನೆಯವರನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಕೊನೆ ನಾನು ಹೇಳಿದಂತೆ ಕೇಳಬೇಕು ಇಲ್ಲದಿದ್ದಲ್ಲಿ ನಿಮ್ಮ ಮನೆಯವರಿಗೆ ಅಪಾಯ ಗ್ಯಾರೆಂಟಿ ಎಂದು ಹೆದರಿಸಿದ್ದಾನೆ. ತೇಜಸ್ ಬೆದರಿಕೆಗೆ ಹೆದರಿದ ಯುವತಿ ಹೇಳಿದಂತೆ ಕೇಳಿದ್ದಾಳೆ.ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮಾಡಿ ಬೆತ್ತಲೆ ದೇಹ ತೋರಿಸುವಂತೆ ಬೆದರಿಕೆ ಹಾಕಿದ್ದಾನೆ.
ಮನೆಯವರಿಗೆ ತೊಂದರೆ ಆಗುತ್ತದೆ ಎಂದು ತೇಜಸ್ ಹೇಳಿದಂತೆ ಬೆತ್ತಲೆಯಾಗಿದ್ದಾಳೆ.ಇದನ್ನ ರೆಕಾರ್ಡ್ ಮಾಡಿಕೊಂಡ ತೇಜಸ್ ಬ್ಲಾಕ್ ಮೇಲ್ ಮಾಡುತ್ತಾ ಮದುವೆ ಆಗುವಂತೆ ಒತ್ತಾಯಿಸಿದ್ದಾನೆ. ಮದುವೆ ಆಗದಿದ್ರೆ ವಿಡಿಯೋ ನ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕುಟುಂಬಸ್ಥರು ಹಾಗೂ ಸ್ನೇಹಿತರ ಮುಂದೆ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾನೆ.
ತಂದೆ ಆಸ್ಪತ್ರೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ತೇಜಸ್ ಟಿವಿ ಹೊಡೆದು ಹಾಕಿ, ಅಡುಗೆ ಸಿಲಿಂಡರ್ ನ ಎತ್ತಿಹಾಕಿ, ಪೋಠೋಪಕರಣಗಳನ್ನ ಧ್ವಂಸ ಮಾಡಿದ್ದಾನೆ. ತಡೆಯಲು ಬಂದ ತಾಯಿ ಮೇಲೆ ಹಲ್ಲೆ ನಡೆಸಿ ದಾಂಧಲೆ ಮಾಡಿ ಕೊಲೆ ಬೆದರಿಕೆ ಹಾಕಿ ಹೋಗಿದ್ದಾನೆ. ತೇಜರ್ ಕಿರುಕುಳಕ್ಕೆ ಬೆದರಿದ ನೊಂದ ಯುವತಿ ರಕ್ಷಣೆ ಕೋರಿ ಎನ್.ಆರ್.ಠಾಣೆ ಪೊಲೀಸರ ಮೊರೆ ಹೋಗಿದ್ದಾಳೆ. ತೇಜಸ್ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.

