ಮೈಸೂರು: ಡ್ರಗ್ಸ್ ಫ್ಯಾಕ್ಟರಿ ಪತ್ತೆ ವಿಚಾರವಾಗಿ ಮೈಸೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ನಗರದ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಡ್ರಗ್ಸ್ ಜಾಲ ಪತ್ತೆ ಹಚ್ಚುವಲ್ಲಿ ಸರ್ಕಾರ ವಿಫಲ ಎಂದು ಪ್ರತಿಭಟನೆ ನಡೆಸಿದ್ದು, ಡ್ರಗ್ಸ್ ಮಾಫಿಯ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಮುಂದಾಯಿತು. ಗೃಹ ಸಚಿವ ಪರಮೇಶ್ವರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು. ಜಿಲ್ಲಾ ಕಚೇರಿಯ ಮುಂಭಾಗ ಸರ್ಕಾರಕ್ಕೆ ದಿಕ್ಕಾರ ಘೋಷಣೆ ಕೂಗಲಾಯಿತು. ಡ್ರಗ್ಸ್ ಜಾಲ ಪತ್ತೆ ಮಾಡಲು ಪೊಲೀಸ್ ಇಲಾಖೆ ವಿಫಲವಾಯ್ತಾ ಎಂದು ಪ್ರತಿಭಟನೆ ನಡೆಸಿದರು.
ನಾಲ್ಕು ತಿಂಗಳಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ ಗುಪ್ತಚಾರ ಇಲಾಖೆ ಏನೂ ಮಾಡ್ತಿದೆ ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದರು. ಕೂಡಲೇ ಕ್ರಮ ಕೈಗೊಳ್ಳಬೇಕು ಇದಕ್ಕೆಲ್ಲ ನೇರ ಕಾರಣ ಸರ್ಕಾರ ಆಗಿರುತ್ತೆ ಎಂದು ದಿಕ್ಕಾರ ಘೋಷಣೆ ಕೂಗಿದರು.

