ನಂಜನಗೂಡು: ತಾಲ್ಲೂಕಿನ ಸುಕ್ಷೇತ್ರ ಸುತ್ತೂರು ಮಠದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಸೀಡ್ಸ್ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಚಿತ್ರನಟಿ ಮಾಳವಿಕಾ ಅವಿನಾಶ್ , ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಇನ್ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯಗಳು ಮರಗಳು ನಾಶವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಚಿಟ್ಟೆಗಳು ಹಾಗೂ ಗುಬ್ಬಚ್ಚಿಗಳು ಮಾಯವಾಗಿದೆ.
ಪಟ್ಟಣ ಪ್ರದೇಶದ ಮಕ್ಕಳಿಗೆ ಅವುಗಳ ಹೆಸರು ಇನ್ನು ತಿಳಿದಿಲ್ಲ ನಾವು ಚಿಕ್ಕವರಿರುವಾಗ ಚಿಟ್ಟೆಗಳನ್ನು ಹಿಡಿದು ಅಡಿ ಬೆಳೆದೆವು. ಪರಿಸರ ಉಳಿಸಿದರೆ ಮುಂದಿನ ಜೀವನ ಸುಖವಾಗಿರುತ್ತದೆ ಇಲ್ಲದೆ ಹೋದಲ್ಲಿ ಮುಂದಿನ ಪೀಳಿಗೆಗೆ ಜೀವನ ಬಹಳ ಕಷ್ಟಕರವಾಗಿರುತ್ತದೆ ಎಂದು ಸುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

