ಮೈಸೂರು: ಬಿಜೆಪಿ ಮಾಡ್ತಿರೋದು ಧರ್ಮಯಾತ್ರೆ ಅಲ್ಲ ರಾಜಕೀಯ ಯಾತ್ರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳ ಪ್ರಕರಣ ಎನ್. ಐ. ಎ ತನಿಖೆ ಮಾಡಿಸಿ ಅಂತ ಹೇಳ್ತಾರೆ. ಅವರು ಪೊಲೀಸರು ಇವರು ಪೊಲೀಸರು. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ವಾ?. ಬಿಜೆಪಿ ಮೊದಲು ತನಿಖೆ ಮಾಡಿ ಅಂತ ಹೇಳಲೇ ಇಲ್ಲ. ಡೆಡ್ ಬಾಡಿ ಸಿಗದೆ ಹೋದಮೇಲೆ ಹೇಳಿಕೆ ಕೊಡಲು ಶುರು ಮಾಡಿದ್ರು. ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಅವರ ಮೇಲೆ ಆರೋಪವಿದೆ. ಅವ್ರೆ ಸ್ವಾಗತ ಮಾಡಿದ್ದಾರೆ ಎಂದರು.

ನಾವು ತನಿಖೆ ಮಾಡಿಸುತ್ತಿದ್ದೇವೆ. ಯಾರು ಕೂಡ ನಾನು ಇಂಟರ್ ಫಿಯರ್ ಆಗಿಲ್ಲ. ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ದುಡ್ಡು ಬಂದಿರೋದು ಬಿಜೆಪಿಗೆ ಇಷ್ಟೆಲ್ಲಾ ಮಾಡ್ತಿದ್ದಾರೆ ಎಲ್ಲಿಂದ ದುಡ್ಡು ಬರತ್ತೆ. ಯಾರು ಕೊಡೋರು ಇವರಿಗೆ ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು. ವಿರೋಧ ಪಕ್ಷ ಟೀಕೆ ಮಾಡಲಿ ಇವ್ರು ರಾಜಕೀಯಕ್ಕೆ ಮಾಡ್ತಿದ್ದಾರೆ.

ಸೌಜನ್ಯ ಕೇಸ್ ರಿ ಓಪನ್ ಆಗತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ಸಿಬಿಐ ತನಿಖೆ ಮಾಡಿ ವರದಿ ಕೊಟ್ಟಿದೆ. ಸುಪ್ರೀಂ ಕೋರ್ಟ್ ಅವರ ಕುಟುಂಬ ಹೋಗಲಿ. ಸೌಜನ್ಯ ಕೇಸ್ ಆರೋಪ ಬಂದಿರೋದು ವೀರೇಂದ್ರ ಹೆಗಡೆ ಕುಟುಂಬದ ಮೇಲೆ. ಬಿಜೆಪಿ ಅವ್ರು ಯಾರ ಪರ ? ಕೋರ್ಟ್ ಗೆ ಹೋಗೋದು ಬಿಡೋದು ಸೌಜನ್ಯ ಕುಟುಂಬದವರಿಗೆ ಸೇರಿದ್ದು. ಬಿಜೆಪಿ ಅವ್ರು ಒಂದು ಕಡೆ ವೀರೇಂದ್ರ ಹೆಗಡೆಗೆ ಜೈ ಅಂತಾರೆ. ಇನ್ನೊಂದು ಕಡೆ ಸೌಜನ್ಯ ಪರ ಅಂತಾರೆ ಎಂದರು.

ಇದರಲ್ಲೂ ರಾಜಕೀಯ ಮಾಡ್ತಾರೆ. ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ಚರ್ಚೆ ಆಯ್ತು, ಅಶೋಕ್ ಚರ್ಚೆ ಮಾಡಿದ್ದ, ಸುನಿಲ್ ಕುಮಾರ್ ಕೂಡ ಮಾತನಾಡಿದರು. ಅಲ್ಲಿ ಒಂದು ಇಲ್ಲಿ ಒಂದು ಮಾತನಾಡುತ್ತಾರೆ. ಸೌಜನ್ಯ ಪರ ಲೇಡಿ ಬಂದಿರೋ ವಿಚಾರವಾಗಿ  ಕೋರ್ಟ್ ಗೆ ಸತ್ಯ ಹೇಳಬೇಕಿತ್ತು. ಇಷ್ಟು ವರ್ಷ ಏನು ಮಾಡ್ತಿದ್ರು, ಸಾಕ್ಷಿ ಸತ್ಯ ಗೊತ್ತಿದ್ರೂ ಯಾಕೆ ಸುಮ್ಮನಿದ್ರು. ಆಕೆ ಯಾರ ಸಂಸ್ಥೆಯಲ್ಲಾದರು ಇರಲಿ ಎಂದರು.  ಸೌಜನ್ಯ ಕೇಸ್  ಅಗತ್ಯ ಇದ್ರೆ ಕೋರ್ಟ್ ಗೆ ಹೋಗಲಿ, ಸೌಜನ್ಯ ತಾಯಿ ಅವರಿಗೆ ಬಿಟ್ಟ ತೀರ್ಮಾನ ಅದು ಎಂದರು.