ಮೈಸೂರು: ರಾಜ್ಯ ಹಾಗೂ ನರೆ ರಾಜ್ಯಗಳ ಹಲವೆಡೆ ಹಕ್ಕಿ ಜ್ವರದ ಭೀತಿ ಕಾಣಿಸಿಕೊಂಡಿದ್ದು, ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕೇರಳ ಗಡಿಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಮೈಸೂರು ಕೇರಳಾ ಗಡಿ ಭಾಗ ಬಾವಲಿ ಚೆಕ್ ಪೋಸ್ಟ್ ಬಳಿಯೂ ತಪಾಸಣೆ ನಡೆಸಲಾಗುತ್ತಿದೆ. ತುರ್ತು ಸ್ಥಿತಿ ನಿಭಾಯಿಸಲು 48 ರ್ಯಾಪಿಡ್ ರೆಸ್ಪಾನ್ಸ್ ಟೀಮ್ ರಚನೆ ಮಾಡಲಾಗಿದೆ. ಅಸ್ವಾಭಾವಿಕವಾಗಿ ಸಾವನ್ನಪ್ಪುವ ಕೋಳಿ ಫಾರಂಗಳ ಮೇಲೆ ನಿಗಾ ವಹಿಸಲಾಗಿದೆ.

ಪ್ರಯೋಗಾಯಲಕ್ಕೆ ವಲಸೆ ಹಕ್ಕಿಗಳ ಪಿಕ್ಕೆ ರವಾನೆ ಮಾಡಲಾಗಿದೆ. ಕೇರಳಾ ಭಾಗದಿಂದ ರಾಜ್ಯಕ್ಕೆ ಬರುವ ಕೋಳಿಗಳ ವಾಹನ ತಪಾಸಣೆ ಮಾಡಲಾಗುತ್ತಿದೆ. ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.
ಬಂಡಿಪುರದ ಅಭಯಾರಣ್ಯ ಮಾರ್ಗ ಮಧ್ಯ ಮೂಲೆ ಹೊಳೆ ಚೆಕ್ ಪೋಸ್ಟ್ ಬಳಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಕೋಳಿ ವಾಹನಗಳಿಗೆ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ ಜಕ್ಕಿಜ್ವರ ಕೇಸ್ಗಳು ಬರುವುದಕ್ಕೂ ಮುನ್ನ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.

ಮೈಸೂರು ಜಿಲ್ಲೆಯಲ್ಲಿ 65 ಮೊಟ್ಟೆ ಕೋಳಿ ಫಾರಂ, 235 ಮಾಂಸದ ಕೋಳಿ ಫಾರಂ ಸೇರಿ 300 ಕೋಳಿ ಫಾರಂಗಳಿವೆ. ಅಂದಾಜಿನ ಪ್ರಕಾರ ಮೈಸೂರು ಜಿಲ್ಲೆ ಒಂದರಲ್ಲೇ 50 ಲಕ್ಷ ಕೋಳಿಗಳಿವೆ. ಜಿಲ್ಲಾ ಪಶು ವೈದ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.

