ನಂಜನಗೂಡು: ಪೆಟ್ರೋಲ್ ಹಾಕಿಸಿಕೊಂಡು ಬೈಕ್ ಸವಾರ ಪರಾರಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಬಳಿ ಇರುವ ಕುಂಬರಹಳ್ಳಿ ಸುಬ್ಬಣ್ಣ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.

ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಬದನವಾಳು ಗ್ರಾಮದ ಬಳಿ ಇರುವ ಕುಂಬರಹಳ್ಳಿ ಸುಬ್ಬಣ್ಣ ಹೆಚ್.ಪಿ ಪೆಟ್ರೋಲ್ ಬಂಕ್ ಗೆ ಬಂದ ಕಿಲಾಡಿ ಬೈಕ್ ಸವಾರನೊಬ್ಬ 1200 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೇ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಂಕ್ ಮಾಲೀಕ ಕುಂಬರಹಳ್ಳಿ ಸುಬ್ಬಣ್ಣ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

