ನಂಜನಗೂಡು: ಗೋಮಾಂಸ ಮಾರಾಟ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ ಘಟನೆ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಠಾಣಾ ವ್ಯಾಪ್ತಿಯ ಬಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗೋಮಾಂಸ ನಿಷೇಧ ಹೇರಿದ್ದರೂ ಇಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು ಪೊಲೀಸರ ಸಮ್ಮುಖದಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಆದ್ರೆ ಮಾಂಸ ಮಾರಾಟ ವ್ಯಾಪಾರಿ ಪೊಲೀಸರಿಗೆ ಮಂತ್ಲಿ ಕೊಡ್ತಿದ್ದೀವಿ ಅಂತ ಗ್ರಾಮಸ್ಥರಿಗೆ ಹೇಳಿದ್ದಾರಂತೆ ಇದರಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನೇ ಕರೆದೊಯ್ದಿದ್ದಾರೆ. ತಿಂಗಳಿಗೆ 30 ಸಾವಿರ ಮಂತ್ಲಿ ಕೊಡುತ್ತಿರುವ ಬಗ್ಗೆ ವಿಡಿಯೋ ಮಾಡಿರುವುದಾಗಿ ಗ್ರಾಮದ ಮುಖಂಡ ಕೃಷ್ಣ ಪೊಲೀಸರಿಗೆ ತಿಳಿಸಿದ್ದಾರೆ.

ವಿಡಿಯೋ ಇದ್ದಲ್ಲಿ ಠಾಣೆಗೆ ದೂರು ನೀಡುವಂತೆ ಪೊಲೀಸರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರ ಒತ್ತಡಕ್ಕೆ ಮಣಿದ ವ್ಯಾಪಾರಿ ಮಾಂಸ ಮಾರಾಟ ಸ್ಥಗಿತಗೊಳಿಸಿದ್ದಾನೆಂದು ಹೇಳಲಾಗಿದೆ. ವ್ಯಾಪಾರಿ ಮಂತ್ಲಿ ನೀಡುತ್ತಿರುವುದಾಗಿ ಹೇಳಿರುವ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕಿದೆ.