ಮೈಸೂರು: ಮಗಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣ ಖದೀಮರ ಪಾಲಾಗಿದೆ. ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 2 ಲಕ್ಷ ಲಪಟಾಯಿಸಿದ್ದಾರೆ.

ನಜರಬಾದ್ ನಿವಾಸಿ ಸಂತೋಷ್ ಕುಮಾರ್ ಹಣ ಕಳೆದುಕೊಂಡವರು. ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಸಂತೋಷ್ ಕುಮಾರ್ ಖಾತೆ ಹೊಂದಿದ್ದಾರೆ. ಇದ್ದಕ್ಕಿದ್ದಂತೆ 2 ಲಕ್ಷ ಕಡಿತವಾಗಿರುವ ಮೆಸೇಜ್ ಬಂದಿದೆ.

ಕೂಡಲೇ 1930 ಗೆ ದೂರು ಸಲ್ಲಿಸಿ ಬ್ಯಾಂಕ್ ಗೆ ತೆರಳಿ ಪರಿಶೀಲನೆ ಮಾಡಿದಾಗ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.