ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ.ಆರ್.ಮಹೇಶ್ ರನ್ನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಪ್ರಭಾರ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಕೆ.ಎಸ್.ರಕ್ಷಿತ್ ವರ್ಗಾವಣೆಯಾಗಿ ಒಂದು ತಿಂಗಳು ಕಳೆದರೂ ನೂತನ ಆಯುಕ್ತರನ್ನ ಸರ್ಕಾರ ನೇಮಕ ಮಾಡಿರಲಿಲ್ಲ. ಇದೀಗ ಬಿ.ಆರ್.ಮಹೇಶ್ ರನ್ನ ನೇಮಕ ಮಾಡಿದ್ದು ತೆರುವಾಗಿದ್ದ ಎಂಡಿಎ ಆಯುಕ್ತ ಸ್ಥಾನವನ್ನ ಅಲಂಕರಿಸಲಿದ್ದಾರೆ. ಸದ್ಯ ಬಿ.ಆರ್.ಮಹೇಶ್ ರವರು ಎರಡು ಹುದ್ದೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ.

