ಮೈಸೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ಜೀವಧಾರ ರಕ್ತದಾನ ಕೇಂದ್ರದ ವತಿಯಿಂದ ವಿಶೇಷವಾಗಿ ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಗಣೇಶನ ವೇಷಧರಿಸಿ  ರಕ್ತದಾನದ ಬಗ್ಗೆ ಅರಿವು ಮೂಡಿಸಿದರು. ರಾಮಸ್ವಾಮಿ ವೃತದಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ  ರಕ್ತದಾನದಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನ ಗಣೇಶನ ವೇಷದಾರಿಯಿಂದ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು.

ಮೈಸೂರಿನ ಹಳೆ ಕೆಸರೆ ನಿವಾಸಿ ಲೋಹಿತ್ ಗಣೇಶನ ವೇಷಧಾರಿಯಾಗಿ ಬಂದು ಗಮನ ಸೆಳೆದರಲ್ಲದೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ  ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್  ನಾಳೆ ಗೌರಿ ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ  ಒಂದು ವಿಭಿನ್ನವಾಗಿ  ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ  ಜಾಗೃತಿ ಮೂಡಿಸಿದ್ದೇವೆ.

ರಕ್ತದಾನ ಮಹಾದಾನ  ಮೂಢನಂಬಿಕೆಯನ್ನು ಬಿಟ್ಟು ಸಾರ್ವಜನಿಕರು ಸ್ವಯಂ ಪ್ರೇರಿತ ರಕ್ತದಾನ ಮಾಡಬಹುದು ಎಂದು ಹೇಳಿದರು. ನೀವು ನೀಡುವ ರಕ್ತದಿಂದ ಇನ್ನೊಂದು ಜೀವ ಉಳಿಸಬಹುದು ಎಂದು ಹೇಳಿದರು ದಯಮಾಡಿ  ಯುವ ಪೀಳಿಗೆ ನಿರಂತರವಾಗಿ  ಸ್ವಯಂ ಪ್ರೇರಿತ ರಕ್ತದಾನ ಮಾಡಲಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ  ಕೆ ಎಂ  ಪಿ ಕೆ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,  ಸೂರಜ್, ಸದಾಶಿವ್, ಚಂದ್ರು,  ಹಾಗೂ ಇನ್ನಿತರರು ಹಾಜರಿದ್ದರು.