ಮೈಸೂರು : ಹೃದಯಾಘಾತದಿಂದ ಆಟೋ ಚಾಲಕ ಸಾವನ್ನಪ್ಪಿದ ಘಟನೆ ಮೈಸೂರಿನ ರಾಮಸ್ವಾಮಿ ವೃತದಲ್ಲಿ ನಡೆದಿದೆ. ಚೇತನ್ (45) ಮೃತ ಆಟೋ ಚಾಲಕ. ಗಾಡಿ ಚಾಲನೆ ಮಾಡುವ ಸಂದರ್ಭದಲ್ಲೇ ಎದೆ ನೋವು ಕಾಣಿಸಿಕೊಂಡಿದೆ.

ಬಳಿಕ ಆಟೋವನ್ನ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಆಟೋ ಚಾಲಕ ವಿಶ್ರಾಂತಿ ಪಡೆಯುತ್ತಿದ್ದನು. ಆಟೋದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಲಕ್ಷ್ಮಿಪುರಂ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.