ಮೈಸೂರು : ಹುಲಿ ದಾಳಿಗೆ ಮತ್ತೊಂದು ರೈತ ಬಲಿಯಾಗಿರುವ ಘಟನೆ ಸರಗೂರು ತಾಲೂಕಿನ ಹಳೆ ಹೆಗ್ಗೂಡಿಲು ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಉಳುಮೆಗೆ ತೆರಳಿದ್ದ ರೈತನ ಮೇಲೆ ಏಕಾಏಕಿ ಹುಲಿ ದಾಳಿ ಮಾಡಿದೆ.

ದಂಡನಾಯಕ (52) ಸಾವು. ಜಮೀನಿನಲ್ಲಿ ಕೊಂದು ಅರ್ಧ ಕಿಲೋಮೀಟರ್ ದೂರ ಹುಲಿ ಎಳೆದುಕೊಂಡು ಹೋಗಿದೆ. ರೈತನ ತೊಡೆ, ತಲೆ ಭಾಗ ಹುಲಿ ತಿಂದು ಹಾಕಿದೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ ನಾಲ್ಕನೆ ಹುಲಿ ದಾಳಿ ಪ್ರಕರಣ ಇದಾಗಿದ್ದು, ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳಲ್ಲಿ  ದಾಳಿ ನಡೆದಿದೆ. ಹುಲಿ ದಾಳಿಗೆ ಮೂರನೇ ಬಲಿ, ಮತ್ತೊಬ್ಬ ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯಿಂದ ಜನರು ಭಯಭೀತರಾಗಿದ್ದಾರೆ.