ತಿ. ನರಸೀಪುರ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತರೊಡನೆ ಗಿಡಕ್ಕೆ ನೀರೇರಿಯುವ ಮೂಲಕ ಕಾರ್ಯಕ್ರಮವನ್ನು ಸಿಡಿಪಿಓ ಗೋವಿಂದ್ ರಾಜ್ ಉದ್ಘಾಟಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರವರ ಮಾತನಾಡಿ ಮಕ್ಕಳು ಬೆಳವಣಿಗೆಯಾಗಲು ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹಳ ಹಿರಿಮೆಯದು ಪೋಷಕರು ಮಕ್ಕಳಿಗೆ ಅಭ್ಯಾಸದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಅದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡು ಮಕ್ಕಳಿಗೂ ಸಹೋದರಿ ಮತ್ತು ಸಹೋದರ ರೀತಿ ವರ್ತನೆ ಮಾಡುವ ಸಂಸ್ಕಾರವನ್ನು ಕಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರಿಗೆ ಗೌರವಿಸಿ ಸನ್ಮಾನಿಸಲಾಯಿತು. ಸಂದರ್ಭ ಟಿಹೆಚ್ಒ ರವಿಕುಮಾರ್,ಇ. ಓ ಅನಂತರಾಜು, ಪುರಸಭಾ ಮುಖ್ಯ ಅಧಿಕಾರಿ ವಸಂತಕುಮಾರಿ, ಸರೋಜಮ್ಮ ಪಿಎಂ, ಶಾರದಾದೇವಿ.ಎಲ್, ನಿಮ್ಮ ಕುಮಾರಿ ಉಮಾ ಸೇರಿದಂತೆ ಮತ್ತಿತರರು ಇದ್ದರು.

