ಮೈಸೂರು: ಸ್ವಚ್ಛತೆಗಾಗಿ ಮೈಸೂರು ಪಾಲಿಕೆ ಸಾಕಷ್ಟು ಕಸರತ್ತು ನಡೆಸುತ್ತಿದೆ. ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಹೀಗಿದ್ದೂ ಮೈಸೂರಿನ ಕೆಲವು ಸ್ಥಳಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಸ್ವಚ್ಛತೆಗಾಗಿ ಮೈಸೂರಿನ ದಳವಾಯಿ ಶಾಲೆ ಮುಂಭಾಗ ಹೊಸ ಪ್ರಯೋಗ ಮಾಡಿದ್ದಾರೆ. ಇದರಲ್ಲಿ ಯಶಸ್ವಿಯನ್ನೂ ಕಂಡು ಕೊಂಡಿದ್ದಾರೆ.
ಈ ಸ್ಥಳದಲ್ಲಿ ಕಸ ಹಾಕಿದ್ರೆ ಕಸದ ಜೊತೆ ನಿಮ್ಮ ಪಿಂಡ ಪ್ರಧಾನ ಮಾಡಲಾಗುವುದೆಂಬ ಸಂದೇಶವಿರುವ ಫಲಕ ಅಳವಡಿಸಿದ್ದಾರೆ. ಭಾವಪೂರ್ಣ ಶ್ರದ್ದಾಂಜಲಿ ಎಂದು ಉಲ್ಲೇಖಿಸಿ ನಿಮ್ಮ ಹೆಣ ಸುಡಲು ಕಸ ಬೇಕಿದೆ ಇಲ್ಲಿಗೆ ಕಸ ತಂದು ಹಾಕಿದ್ರೆ ನಿಮ್ಮ ಕಸದೊಂದಿಗೆ ನಿಮ್ಮ ಪಿಂಡ ಪ್ರಧಾನ ಮಾಡಲಾಗುವುದು. ಇಲ್ಲಿ ಕಸ ಹಾಕುವವರಿಗೆ ನರಕಕ್ಕೆ ದಾರಿ ಎಂಬ ಸಂದೇಶ ಇರುವ ಫಲಕ ಅಳವಡಿಸಿದ್ದಾರೆ. ಸಧ್ಯ ಈ ಫಲಕ ಅಳವಡಿಸಿದ ನಂತರ ಈ ಸ್ಥಳ ಕಸದ ಹಾವಳಿಯಿಂದ ಮುಕ್ತವಾಗಿದೆ.

