ಮೈಸೂರು : ಕಾಡಾನೆ ಓಡಿಸಲು ಎಐ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟೀಯ ಉದ್ಯಾನವನ ಗಡಿ ಪ್ರದೇಶದಲ್ಲಿ ಪ್ರಾಯೋಗಿಕ ಬಳಕೆ ಮಾಡಲಾಗಿದೆ.
ಆನೆ ಕಾಣಿಸುತ್ತಿದ್ದಂತೆ ಕ್ಯಾಮರಾ ಸದ್ದು ಮಾಡುತ್ತದೆ. 20ಕ್ಕೂ ಹೆಚ್ಚು ವಿವಿಧ ಬಗೆಯ ಶಬ್ದವನ್ನು ಈ ಕ್ಯಾಮರಾ ಮಾಡುತ್ತದೆ. ಆನೆಗಳು 150 ಮೀಟರ್ ದೂರದಲ್ಲಿದ್ದಾಗಲೇ ಕ್ಯಾಮರಾ ಕೂಗುತ್ತದೆ. ಶಬ್ದಕ್ಕೆ ಹೆದರಿ ಆನೆಗಳು ಓಡುತ್ತದೆ. ವೀರನಹೊಸಳ್ಳಿ ಅರಣ್ಯ ವಲಯದಲ್ಲಿ ಅಳವಡಿಕೆ ಮಾಡಲಾಗಿದೆ.
ತೋಟದ ಕಾವಲುಗಾರನ ರೀತಿ ಎಐ ಕ್ಯಾಮರಾ ಕೆಲಸ ಮಾಡುತ್ತದೆ. ಕಾಡಂಚಿನಲ್ಲಿ ಕ್ಯಾಮರಾ ಅಳವಡಿಕೆಯಿಂದ ಆನೆಗಳ ಹಾವಳಿ ತಗ್ಗಿಸಲಾಗುತ್ತಿದೆ. ರೈತರು ಹಾಗೂ ತೋಟದ ಬೆಳೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೂಗು ಕ್ಯಾಮರಾ ಸಹಕಾರಿಯಾಗಿದೆ.
ಮುಂದಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಜಾಸ್ತಿ ಇರುವ ಕಡೆ ಕ್ಯಾಮರಾಗಳ ಅಳವಡಿಕೆಗೆ ಚಿಂತನೆ ಮಾಡಲಾಗಿದೆ. ಕೂಗು ಕ್ಯಾಮರಾವನ್ನು ಕಾಡಾನೆಗಳು ಜಾಸ್ತಿ ಓಡಾಡುವ ಪ್ರದೇಶದಲ್ಲಿ ಕೂಗು ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಆನೆಗಳು ಕಣ್ಣಿಗೆ ಬಿದ್ದೊಡನೆ ಕ್ಯಾಮರಾ ಕೂಗುತ್ತದೆ. ಆನೆಗಳು ಹೆದರುವ ರೀತಿ ಜೇನುನೊಣ, ಪಟಾಕಿ ಶಬ್ದ, ಸೇರಿ ಅನೇಕ ರೀತಿ ಕೂಗುವ ಕ್ಯಾಮರಾ ಶಬ್ದಕ್ಕೆ ಹೆದರಿ ಕಾಡಾನೆಗಳು ಓಡುತ್ತದೆ.

