ಮೈಸೂರು: ಸಿಡಿಲು ಬಡಿದು ಆದಿವಾಸಿ ಸಾವನ್ನಪ್ಪಿದರೆ ಮತ್ತೊಂದೆಡೆ ಹಸು ಮೃತಪಟ್ಟಿದೆ. ಮೇಕೆ ಮೇಯಿಸುತ್ತಿದ್ದ ಆದಿವಾಸಿ ಅಪ್ಪಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಎಚ್.ಡಿ.ಕೋಟೆ ತಾಲೋಕಿನ ಮಾಳದ ಹಾಡಿ ಗ್ರಾಮದ ನಿವಾಸಿ ಅಪ್ಪಯ್ಯ ಮೃತ ದುರ್ದೈವಿ.ಇಂದು ಮಧ್ಯಾಹ್ನ ಸಿಡಿಲು ಗುಡುಗು ಸಮೇತ ಆರಂಭವಾದ ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ದುರ್ಘಟನೆ ನಡೆದಿದೆ.

ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಿಡಿಲ ಬಡಿತಕ್ಕೆ ಮೇವು ಮೇಯುತ್ತಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.