ಮೈಸೂರು : ಬಸ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮೈಸೂರು ಹುಣಸೂರು ರಸ್ತೆ ಪಡುವಾರಹಳ್ಳಿ ಜಂಕ್ಷನ್ ಬಳಿ ನಡೆದಿದೆ.

ಗೋಕುಲಂ ನಿವಾಸಿ ಕಾರ್ತಿಕ್ (27) ಸಾವನ್ನಪ್ಪಿದ ಸವಾರ. ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಕಾರ್ತಿಕ್ ತಲೆಗೆ ಗಂಭೀರ ಪೆಟ್ಟಾಗಿದೆ. ಹೆಲ್ಮೆಟ್ ಹಾಕಿ ಸ್ಟ್ರಿಪ್ ಹಾಕದ ಹಿನ್ನೆಲೆ ಅಪಘಾತವಾದಾಗ ಹೆಲ್ಮೆಟ್ ರಕ್ಷಣೆ‌ ಸಿಗಲಿಲ್ಲ.

ಗಾಯಗೊಂಡ ಕಾರ್ತಿಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಸಾವನ್ನಪ್ಪಿದ್ದಾನೆ. ಮೈಸೂರು ವಿ ವಿ‌ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.