ಮೈಸೂರು: ಪರಿಚಯದ ಯುವತಿಗೆ ಮೆಸೇಜ್ ಮಾಡಿದ ಹಿನ್ನಲೆ ಆಕೆಯ ಲವರ್ ಅಂಡ್ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ಶಾರದಾದೇವಿ ನಗರದಲ್ಲಿ ನಡೆದಿದೆ. ಹಲ್ಲೆ ನಡೆಸಿದ 5 ಮಂದಿ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾರದಾದೇವಿ ನಗರದ ಅಭಿಲಾಶ್, ವಿನೋದ್ ಹಾಗೂ ಗುರು ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಕಾರ್ತಿಕ್, ಅರ್ಜುನ, ಪ್ರಶಾಂತ್, ಗುರು, ತರುಣ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. ವಿನೋದ್ ತನಗೆ ಪರಿಚಯ ಇದ್ದು ಯುವತಿಗೆ ಮೆಸೇಜ್ ಮಾಡಿದ್ದಾನೆ. ಆ ಯುವತಿ ತಾನು ಪ್ರೀತಿಸುತ್ತಿದ್ದ ಕಾರ್ತಿಕ್ ಗೆ ಮೆಸೇಜ್ ಮಾಡಿದ ವಿಚಾರ ಹೇಳಿದ್ದಾಳೆ.

ಇದರಿಂದ ಗುಂಪುಕಟ್ಟಿಕೊಂಡು ಬಂದ ಕಾರ್ತಿಕ್ ಶಾರದಾದೇವಿ ನಗರದ ಬ್ಯಾಂಕರ್ಸ್ ಕ್ಲಬ್ ಬಳಿ ಅಭಿಲಾಷ್,ವಿನೋದ್,ಗುರು ರವರು ನಿಂತಿದ್ದಾಗ ರಾಡ್ ಮತ್ತು ಹಾಕಿ ಸ್ಟಿಕ್ ಗಳಿಂದ ಅಟ್ಯಾಕ್ ಮಾಡಿದ್ದಾರೆ. ಈ ಸಂಬಂಧ ಅಭಿಲಾಷ್ ಸರಸ್ವತಿ ಪುರಂ ಠಾಣೆಯಲ್ಲಿ ಹಲ್ಲೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.