ಮೈಸೂರು: ಹಣದ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಯುವಕ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಇಬ್ಬರು ಯುವಕರ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಹಾದ್ ಅಹ್ಮದ್ ಹಲ್ಲೆಗೆ ಒಳಗಾದ ಯುವಕ.ಹಲ್ಲೆ ನಡೆಸಿದ ತೌಸೀಫ್ ಹಾಗೂ ಶೈಜಾನ್.ಆ.ಶೈಯು ವಿರುದ್ದ ಪ್ರಕರಣ ದಾಖಲಾಗಿದೆ. ಫಹಾದ್ ಅಹ್ಮದ್ ಮನೆ ಮುಂದೆ ಇದ್ದ ಟೀ ಅಂಗಡಿ ಬಳಿ ಹಣದ ವಿಚಾರದಲ್ಲಿ ತೌಸೀಫ್ , ಶೈಯು ಹಾಗೂ ಮಹಮದ್ ಎಂಬುವರ ನಡುವೆ ಗಲಾಟೆ ನಡೆಯುತ್ತಿತ್ತು. ಜಗಳ ಬಿಡಿಸಲು ಫಹಾದ್ ಅಹ್ಮದ್ ಎಂಟ್ರಿ ಕೊಟ್ಟಿದ್ದ.

ಈ ವೇಳೆ ತೌಸೀಫ್ ಹಾಗೂ ಶೈಯುಗೆ ಫಹಾದ್ ಅಹಮದ್ ಬುದ್ದಿ ಹೇಳಿ ಕಳಿಸಿದ್ದ.ಮಹಮದ್ ಪರ ಮಾತನಾಡಿದ ಫಹಾದ್ ಮೇಲೆ ಇಬ್ಬರೂ ಧ್ವೇಷ ಬೆಳೆಸಿಕೊಂಡರು.ಜಗಳ ಬಿಡಿಸಿದ ದಿನ ರಾತ್ರಿ ಮಾತನಾಡಬೇಕೆಂದು ಫಹಾದ್ ನ ತೌಸೀಫ್ ಹಾಗೂ ಶೈಯು ಕರೆದೊಯ್ದಿದ್ದಾರೆ.

ಮನೆ ಬಿಟ್ಟ ಮಗ ಹಿಂದಿರುಗದ ಕಾರಣ ತಾಯಿ ಹುಡುಕಾಡಿಕೊಂಡ ತೆರಳಿದಾಗ ಯಾರುಬ್ ಮಸೀದಿ ಬಳಿ ಇರುವ ಅಂಗನವಾಡಿ ಕಾಂಪೌಂಡ್ ಒಳಗೆ ಫಹಾದ್ ಮೇಲೆ ಇಬ್ಬರು ಆರೋಪಿಗಳು ಮೊಚ್ಚಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ತಾಯಿ ಬಂದ ಕಾರಣ ಫಹಾದ್ ನ ಬಿಟ್ಟು ಓಡಿದ್ದಾರೆ.ತೀವ್ರ ಗಾಯಗೊಂಡ ಫಹಾದ್ ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೌಸೀಪ್ ಹಾಗೂ ಶೈಯು ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.