ನಂಜನಗೂಡು: ಮಧ್ಯದ ಜೊತೆ ಕ್ರಿಮಿನಾಶಕ ಸೇವಿಸಿದ ಯುವಕ ಕಳೆದ ಆರು ದಿನಗಳಿಂದ ಮೈಸೂರಿನ ಕೆ ಆರ್ ಆಸ್ಪತ್ರೆಯ ತುರ್ತು ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ನಂಜನಗೂಡು ತಾಲೂಕು ಕೊತ್ತನಹಳ್ಳಿ ಆದಿವಾಸಿ ಕಾಲೋನಿಯ ಗುರುಮಲ್ಲು (28) ಆತ್ಮಹತ್ಯೆಗೆ ಯತ್ನಿಸಿದವರು.ಕಳೆದ ಹಲವು ವರ್ಷಗಳಿಂದ ಕೊತ್ತನಹಳ್ಳಿ ಹಾಡಿ ಸಮೀಪದ ಭೋಗಯ್ಯನ ಒಡೆಯನಪುರ ಗ್ರಾಮದ ಮುಜೀಬ್ ಎಂಬುವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಒಂದು ವಾರದ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕ್ರಿಮಿನಾಶಕ ಸೇವಿಸಿದ್ದರು.ಘಟನೆ ನಂತರ ಎರಡು ದಿನಗಳ ಕಾಲ ಕಾಲೋನಿಯಲ್ಲೇ ಅಸ್ವಸ್ಥನಾಗಿ ಬಿದ್ದದ್ದು ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ.ಗುರುಮಲ್ಲು ಆತ್ಮಹತ್ಯೆಗೆ ಯತ್ನಿಸಿದ ಕಾರಣ ಗೊತ್ತಿಲ್ಲ.ಪೊಲೀಸ್ ಠಾಣೆಗೂ ಮಾಹಿತಿ ಇಲ್ಲ.ಒಟ್ಟಾರೆ ಸಧ್ಯ ಗುರುಮಲ್ಲು ಕೆ.ಆರ್.ಆಸ್ಪತ್ರೆ ತುರ್ತು ಘಟಕದಲ್ಲ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.