ಮೈಸೂರು : ಹುಲಿ ಆತಂಕ ಮನೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ, ಸರಗೂರು ತಾಲ್ಲೂಕು ಭಾಗದಲ್ಲಿ ಇದೆ. ಇಟ್ನ ಗ್ರಾಮದ ಸುತ್ತಮುತ್ತ ಹುಲಿ ಇರೋದು ದೃಢ ಪಟ್ಟಿದೆ. ರೈತರು, ಗ್ರಾಮಸ್ಥರು ಎಚ್ಚರಿಕೆಯಿಂದಿರುವಂತೆ ಮನವಿ ಮಾಡಲಾಗಿದೆ.
ಯಾರಿಗಾದರೂ ಹುಲಿ ಅಥವಾ ಅದರ ಚಿಹ್ನೆ ಕಂಡುಬಂದರೆ ತಿಳಿಸಲು ಮನವಿ ಮಾಡಲಾಗಿದೆ. ಸಹಾಯವಾಣಿ ಸಂಖ್ಯೆ 1926 ಕರೆ ಮಾಡಿ ಮಾಹಿತಿ ನೀಡುವಂತೆ ಶಾಸಕ ಅನಿಲ್ ಚಿಕ್ಕಮಾದು ರಿಂದ ಮನವಿ ಮಾಡಲಾಗಿದೆ.

