ನಂಜನಗೂಡು: ಹಾಡುಹಗಲೇ ಜಮೀನಿನಲ್ಲಿ ಹುಲಿ ರಾಜಾರೋಷವಾಗಿ ಓಡಾಡಿದೆ. ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿಯಲ್ಲಿ ಹುಲಿ ಕಾಣಿಸಿಕೊಂಡಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ದಿಕ್ಕಾಪಾಲಾಗಿ ಓಡಿದ್ದಾರೆ.

ರೈತರೊಬ್ಬರು ಸಮೀಪದಿಂದಲೇ ಹುಲಿ ಓಡಾಟವನ್ನ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬೆಣ್ಣಿಗೆರೆ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ರೈತನ ಮೇಲೆ ದಾಳಿ ನಡೆಸಿತ್ತು.

ಮಡುವಿನಹಳ್ಳಿ, ಕಂದೇಗಾಲ, ಹಾಡ್ಯ, ಚಿಲಕನಹಳ್ಳಿ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದೆ. ಇಂದು ಮಡುವಿನಹಳ್ಳಿಯ ಶಿರಮಳ್ಳಿ ಶಿವಣ್ಣ ರವರ ಜಮೀನಿನಲ್ಲಿ ಕಾಣಿಸಿಕೊಂಡಿದೆ. ಹುಲಿಯನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.