ಮೈಸೂರು: ಹಾಲಿನ ದರ ಏರಿಕೆ ವಿಚಾರವಾಗಿ ಮೈಸೂರಿನಲ್ಲಿ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ಎಲ್ಲದಕ್ಕೂ ದರ ಏರಿಸುತ್ತಾ ಬಂದಿದೆ. ಮರಣ ಜನನ ಪ್ರಮಾಣ ಪತ್ರದಿಂದ ಹಿಡಿದು ಪಹಣಿ ಪತ್ರದ ತನಕ ಏರಿಕೆ ಮಾಡಿದ್ದಾರೆ. ಈಗ ಹಾಲಿನ ದರ ಏರಿಕೆ ಮಾಡಿದ್ದಾರೆ ಎಂದರು.

ರೈತರಿಗೆ 4 ರೂಪಾಯಿ ಕೊಡ್ತೀವಿ ಅಂತ ಮಾಡಿದ್ದಾರೆ. ಮುಂದೆ ವಿದ್ಯುತ್ ದರವನ್ನು ಏರಿಕೆ ಮಾಡುತ್ತಾರೆ. ಗ್ಯಾರೆಂಟಿ ಯೋಜನಗಳಿಗೆ ಹಣ ಹೊಂದಿಸುತ್ತಿದ್ದಾರೆ. 1 ತಿಂಗಳು ಹಣ ಕೊಟ್ಟು 3 ತಿಂಗಳು ಕೊಡೋದಿಲ್ಲ. 5 ಗ್ಯಾರೆಂಟಿ ಹೆಸರನ್ನು ಹೇಳಿಕೊಂಡು 5 ವರ್ಷ ಮುಗಿಸೋಣ ಅಂತ ಇದ್ದಾರೆ ಎಂದರು.

ಮುಂದೆ ಕಾಂಗ್ರೆಸ್ ಬರಲ್ಲ ಅಂತ ಗೊತ್ತು. ಬಿಜೆಪಿ ಅಧಿಕಾರಕ್ಕೆ ಬರತ್ತೆ , ಹೀಗಾಗಿ ಇರೋ ತನಕ ಕಾಲ ತಳ್ಳುವ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣ ಸ್ವಾಮಿ ಹರಿಹಾಯ್ದರು.