ಮೈಸೂರು: ತಾನು ಸಿಬಿಐ ಅಧಿಕಾರಿ ನಿಮ್ಮನ್ನು ಅರೆಸ್ಟ್ ಮಾಡ್ತೀವಿ ಎಂದು ಬೆದರಿಸಿ ಮೈಸೂರಿನ ವೃದ್ದರೊಬ್ಬರಿಗೆ 7 ಲಕ್ಷ ಪೀಕಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬನ್ನಿಮಂಟಪ ಲೇಔಟ್ ನ ನಿವಾಸಿ ಡಾ.ನಜರುಲ್ಲಾ(72) ವಂಚನೆಗೆ ಒಳಗಾದವರು. ಡಾ.ನಜರುಲ್ಲಾ ಫೋನ್ ಗೆ ಕರೆ ಮಾಡಿದ ವಂಚಕ ತಾನು ಸಿಬಿಐ ಅಧಿಕಾರಿ ಎಂದು ಬೆದರಿಸಿದ್ದಾನೆ.
ವ್ಯಕ್ತಿಯೊಬ್ಬನನ್ನ ಅರೆಸ್ಟ್ ಮಾಡಿ ಆತಮ ಮೊಬೈಲ್ ಸೀಜ್ ಮಾಡಿ ಪರಿಶೀಲಿಸಿದಾಗ ಸಿಮ್ ಕಾರ್ಡ್ ನಿಮ್ಮ ಹೆಸರಲ್ಲಿದ್ದು ಮಾನವಕಳ್ಳಸಾಗಣೆ ಮಾಡುತ್ತಿರುವ ಆರೋಪ ಹೊರೆಸಿ ಬೆದರಿಸಿ 7 ಲಕ್ಷ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಸಂಬಂಧ ಡಾ.ನಜರುಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

