ಮೈಸೂರು: ಅಡ್ರೆಸ್ ಇಲ್ಲದ ರಸ್ತೆ, ಅಡಿಗಡಿಗೂ ಗುಂಡಿಯಾಗಿರುವ ಘಟನೆ ಹುಣಸೂರು ತಾಲ್ಲೂಕಿನ ಹಲವು ಗ್ರಾಮಗಳ ರಸ್ತೆಯಾಗಿದೆ. ರಸ್ತೆ ಗುಂಡಿ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಲಾಯಿತು.

ಹುಣಸೂರು ತಾಲ್ಲೂಕಿನ ಉದ್ದೂರು, ಚಲ್ಲಹಳ್ಳಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಧ್ವಂಸವಾಗಿದೆ. ಅತ್ತ ನನ್ನ ಕ್ಷೇತ್ರಕ್ಕೆ ಅನುದಾನ ನೀಡ್ತೀಲ್ಲ ಎಂದು ಸದನದಲ್ಲಿ ಶಾಸಕ ಜಿ ಡಿ ಹರೀಶ್ ಗೌಡ ಅಳಲು ತೋಡಿಕೊಂಡಿದ್ದಾರೆ.

ಇತ್ತ ಕ್ಷೇತ್ರದಲ್ಲಿ ಮಳೆ ನೀರಿನಿಂದ ಗುಂಡಿಗಳು ತುಂಬಿಕೊಂಡಿದೆ. ಗುಂಡಿ ಯಾವುದು, ರಸ್ತೆ ಯಾವುದು ಎಂದು ತಿಳಿಯದೆ ಸವಾರರ ಪರದಾಡುವಂತಾಗಿದೆ. ವಾಹನ ಸವಾರರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಜನರ ಶಾಪಕ್ಕೆ ರಾಜಕಾರಣಿಗಳು ಗುರಿಯಾಗಿದ್ದಾರೆ. ಮಳೆ ಬಂದರೆ ರಸ್ತೆಗಳು ‘ಕೆರೆ’ಯಾಗುತ್ತಿದೆ. ಮಳೆ ನೀರಿನಿಂದ ಗುಂಡಿಗಳು ಕಾಣದೆ ವಾಹನ ಸವಾರರು ನಡುರಸ್ತೆಯಲ್ಲೇ ಬೀಳುತ್ತಿದ್ದಾರೆ.

ಜನರ ಪ್ರಾಣಕ್ಕೆ ಸಂಚಕಾರ ಬಂದಿದ್ದರೂ ಕಣ್ಣು ಮುಚ್ಚಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕುಳಿತಿದ್ದಾರೆ. ವೋಟ್ ಹಾಕಿದ ಜನರಿಂದ ರಾಜಕಾರಣಿಗಳಿಗೆ ಹಿಡಿಶಾಪ. “ಸತ್ತ ಮೇಲೆ ಬರ್ತೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

View this post on Instagram

A post shared by News Karnataka (@newskarnataka)