ನಂಜನಗೂಡು: ನಂಜನಗೂಡು ಪಟ್ಟಣದ ರಾಷ್ಟ್ರಪತಿ ರಸ್ತೆಯಲ್ಲಿರುವ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಮಾಜಿ ಶಾಸಕ ಬಿ.ಹರ್ಷವರ್ಧನ್ ರವರ ನೇತೃತ್ವದಲ್ಲಿ ಬಿಜೆಪಿ ನಗರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಸ್. ಸಿದ್ದರಾಜು ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ನಂಜನಗೂಡು ನಗರದ ಶ್ರೀ ಮಲ್ಲನಮೂಲೆ ಮಠಾಧೀಶರು ಲಿಂಗೈಕ್ಯರಾದ ಶ್ರೀ ಚನ್ನಬಸವ ಸ್ವಾಮೀಜಿ ಮತ್ತು ಸಾಲುಮರದ ತಿಮ್ಮಕ್ಕ ರವರ ನಿಧನದ ಹಿನ್ನೆಲೆಯಲ್ಲಿ ನುಡಿ ನಮನ ಮತ್ತು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಶ್ರೀ ಚನ್ನಬಸವ ಸ್ವಾಮೀಜಿ ಮತ್ತು ಸಾಲುಮರದ ತಿಮ್ಮಕ್ಕ ರವರ ಭಾವಚಿತ್ರಕ್ಕೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಮಲ್ಲನಮೂಲೆಯ ಶ್ರೀ ಚನ್ನಬಸವಸ್ವಾಮೀಜಿ ಮತ್ತು ಸಾಲುಮರದ ತಿಮ್ಮಕ್ಕ ರವರ ಆದರ್ಶಗಳನ್ನು ನಾವು ಪಾಲಿಸಬೇಕು. ಸಾಲುಮರದ ತಿಮ್ಮಕ್ಕ ರವರ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ರೂಪಿಸಬೇಕು. ಮಲ್ಲನ ಮೂಲೆ ಶ್ರೀಗಳು ಪ್ರಾಣಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದರು. ಮಠಕ್ಕೆ ಬಂದ ಭಕ್ತರಿಗೆ ನಿರಂತರವಾಗಿ ದಾಸೋಹ ಮಾಡುತ್ತಿದ್ದರು. ಇವರ ಆಶೀರ್ವಾದ ಪಡೆದು ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ ಉಂಟಾಗಿದೆ. ಚುನಾವಣೆಯ ಸಂದರ್ಭದಲ್ಲಿ ನನಗೆ ಧೈರ್ಯವನ್ನು ತುಂಬಿದ್ದರು ಎಂದು ಸ್ಮರಿಸಿದರು.

ಸಾಲುಮರದ ತಿಮ್ಮಕ್ಕರವರನ್ನು ನಾನು ಭೇಟಿ ಮಾಡಿದ್ದೆ. ಅವರು ಕೂಡ ನಮ್ಮ ಮಾವನವರಾದ ದಿ.ಶ್ರೀನಿವಾಸ್ ಪ್ರಸಾದ್ ರವರ ಬಳಿ ಬಂದು ಮಾತನಾಡುತ್ತಿದ್ದರು. ನನ್ನನ್ನು ಪರಿಚಯ ಮಾಡಿಸಿದ್ದರು. ಸಾಲುಮರದ ತಿಮ್ಮಕ್ಕ ರವರಿಗೆ ಮಕ್ಕಳು ಇರಲಿಲ್ಲ. ಅವತ್ತಿನ ಕಾಲದಲ್ಲಿ 300 ರಿಂದ 500 ಗಿಡಗಳನ್ನು ನೆಟ್ಟು ಗಿಡಗಳನ್ನು ನೆಟ್ಟು ನೀರಿರೆದು ಅವುಗಳನ್ನು ಸಂರಕ್ಷಣೆ ಮಾಡಿ ದನ ಕರುಗಳು ತಿನ್ನದಂತೆ ಕಾಪಾಡಿಕೊಂಡು ಗಿಡಗಳನ್ನು ಬೆಳೆಸಿದರು.

ಪ್ರತಿಯೊಂದು ಗಿಡ ಮರಗಳನ್ನು ತನ್ನ ಮಕ್ಕಳಂತೆ ಬೆಳೆಸಿದ್ದಾರೆ. 90ರ ದಶಕದಲ್ಲಿ ಪತ್ರಿಕೆಯಲ್ಲಿ ಸಾಲುಮರದ ತಿಮ್ಮಕ್ಕ ಎಂದು ಸುದ್ದಿ ಪ್ರಕಟಗೊಂಡಿತು ಇದನ್ನು ನಾನು ಓದಿದ್ದೆ. ಕುಡಿಯೋಕೆ ನೀರಿಲ್ಲದ ಸಂದರ್ಭದಲ್ಲಿ ದೂರದ ತನಕ ನಡೆದುಕೊಂಡು ಹೋಗಿ ಗಿಡಗಳನ್ನು ನೆಟ್ಟು ಅವುಗಳನ್ನು ಘೋಷಣೆ ಮಾಡಿ ಬೆಳೆದು ಸಾಲುಮರದ ತಿಮ್ಮಕ್ಕ ಎಂಬ ಬಿರುದು ಪಡೆದುಕೊಂಡರು. ಅಮೆರಿಕಾದಲ್ಲಿ ಸಾಲುಮರದ ತಿಮ್ಮಕ್ಕರವರ ಸಾಧನೆಯನ್ನು ಶಾಲಾ ಕಾಲೇಜುಗಳಲ್ಲಿ ಪಠ್ಯವನ್ನಾಗಿ ಅಳವಡಿಸಿಕೊಂಡಿದ್ದಾರೆ. ಅಲ್ಲಿಯ ತನಕ ಅವರ ಪರಿಸರದ ಕಾಳಜಿ ಪಸರಿಸಿದೆ ಅವರ ಕಾರ್ಯ ಶ್ಲಾಘನೀಯ ಎಂದರು.

ಲಿಂಗೈಕ್ಯರಾದ ಶ್ರೀ ಮಲ್ಲನಮೂಲೆ ಮಠಾಧೀಶರಾದ ಚನ್ನಬಸವಸ್ವಾಮೀಜಿ ಹಾಗೂ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ರವರಿಗೆ ನುಡಿ ನಮನ ಸಲ್ಲಿಸಿ ಮೌನಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಹರ್ಷವರ್ಧನ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಮಂಡಲ ಅಧ್ಯಕ್ಷ ಎಸ್.ಸಿದ್ದರಾಜು, ನಿಕಟ ಪೂರ್ವ ಅಧ್ಯಕ್ಷರಾದ ಮಹೇಶ್, ಶ್ರೀನಿವಾಸ ರೆಡ್ಡಿ, ಮಾಜಿ ತಾಪಂ ಸದಸ್ಯ ಬದನವಾಳು ರಾಮು, ಅಧ್ಯಕ್ಷರಾದ ಮಹದೇವಸ್ವಾಮಿ, ವೀರಶೈವ ಕ್ರೆಡಿಟ್ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಸವಣ್ಣ, ನಗರಸಭಾ ಸದಸ್ಯರಾದ ಮಹದೇವಪ್ರಸಾದ್, ಸಿದ್ದರಾಜು, ವಳಗೆರೆ ಪುಟ್ಟಸ್ವಾಮಿ, ಕಾಳಪ್ಪ, ವಕೀಲರಾದ ಅಂಬಾಳೆ ಮಹೇಶ್, ನಂದಿನಿ ಮಹೇಶ್, ವಿಷ್ಣುವರ್ಧನ್ , ಹೆಮ್ಮರಗಾಲ ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.