ಮೈಸೂರು: ಮೈಸೂರಿನ ಹೃದಯಭಾಗದ ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ತಲೆ ಮೇಲೆ ವ್ಯಕ್ತಿಯೊಬ್ಬ ಹತ್ತಿ ಕುಳಿತ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹಾಡು ಹಗಲೇ ವ್ಯಕ್ತಿ ರಾಜಾರೋಷವಾಗಿ ಪ್ರತಿಮೆ ಮೇಲೆ ಹತ್ತಿ ಕುಳಿತಿದ್ದಾನೆ. ಸಾರ್ವಜನಿಕರೊಬ್ಬರು ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು 30 ನಿಮಿಷಗಳ ಕಾಲ ವ್ಯಕ್ತಿ ಪ್ರತಿಮೆ ಮೇಲೆ ಕುಳಿತಿದ್ದಾನೆ.
ನಂತರ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ವ್ಯಕ್ತಿ ಪ್ರತಿಮೆಯಿಂದ ಇಳಿದಿದು ನಾಪತ್ತೆಯಾಗಿದ್ದಾನೆ. ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯ ಪತ್ತೆಗೆ ಜಾಲ ಬೀಸಿದ್ದಾರೆ.

