ಮೈಸೂರು : ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ಇರಿಸಿದ್ದ ಬೋನಿನಲ್ಲಿ ಗಂಡು ಚಿರತೆ ಬಂಧಿಯಾಗಿದೆ. ಬೋನಿನಲ್ಲಿ‌ ಇರಿಸಿದ್ದ ಕರು ಭಕ್ಷಿಸಲು ಬಂದು ಚಿರತೆ ಬಂಧಿಯಾಗಿದೆ. ಒಂದೇ ಬೋನಿನಲ್ಲಿ ಯಾವುದೇ ಅಡೆತಡೆ ಇಲ್ಲದಂತಿದ್ದರೂ ಕರುವಿಗೆ  ಚಿರತೆ ಯಾವುದೇ ಅಪಾಯ ಮಾಡಲಿಲ್ಲ.

ಕರು ಮತ್ತು ಚಿರತೆ ಪರಸ್ಪರ ಬೋನಿ‌ಲ್ಲಿದ್ದರೂ ಕರುವಿಗೆ ಯಾವುದೇ ಅಪಾಯ ಮಾಡದೆ ಚಿರತೆ ಅಚ್ಚರಿ‌ ಮೂಡಿಸಿದೆ. ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದ ಹಿನ್ನಲೆ ಅರಣ್ಯ ಇಲಾಖೆ  ಬೋನು ಇರಿಸಿದ್ದರು.

ಹೆಚ್.ಡಿ.ಕೋಟೆ ಪಟ್ಟಣದ ವಾಸಿ ಹೆತ್ತನಾಯ್ಕರ ಜಮೀನಿನಲ್ಲಿರಿಸಿದ್ದ‌ ಬೋನು ಇತ್ತು. ಕಳೆದ ರಾತ್ರಿ ಆಹಾರ ಅರಸಿ ಬಂದ ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಬಂಧಿಯಾಗಿದೆ.  ಇಂದು ಸ್ಥಳಕ್ಕಾಗಮಿಸಿ ಸೆರೆ ಸಿಕ್ಕ ಚಿರತೆ ಮತ್ತೊಂದು ಬೋನಿಗೆ ಸ್ಥಳಾಂತರಿಸಿ  ಅರಣ್ಯ ಇಲಾಖೆ ಕೊಂಡೊಯ್ದಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಆರೋಗ್ಯ ಆಧರಿಸಿ ಅರಣ್ಯಕ್ಕೆ ಬಿಡುವ ಚಿಂತನೆ ನಡೆಸಲಾಯಿತು. ಸೆರೆ ಸಿಕ್ಕಿ‌ ಬೋನಿನಲ್ಲಿದ್ದ ಚಿರತೆ ನೋಡಲು  ಜನ ಗುಂಪು ಸೇರಿದರು.