ಶಿವಮೊಗ್ಗ : ಚಲಿಸುತ್ತಿರುವಾಗಲೇ ಮೈಸೂರು ಶಿವಮೊಗ್ಗ ರೈಲು ಸಂಪರ್ಕ ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ತುಂಗಾ ನದಿ ಮೇಲೆ ಬೋಗಿಗಳನ್ನು ಬಿಟ್ಟು ದೂರ ಇಂಜಿನ್ ಚಲಿಸಿದೆ.

ತುಂಗಾ ಸೇತುವೆ ಮೇಲೆ ಸ್ವಲ್ಪ ದೂರ ಇಂಜಿನ್ ಇಲ್ಲದೇ ಬೋಗಿಗಳು ಚಲಿಸಿವೆ. ಇದನ್ನ ಗಮನಿಸಿದ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ. ಇನ್ನೊದೆಡೆ ರಭಸವಾಗಿ ಹರಿಯುತ್ತಿದ್ದ ತುಂಗಾನದಿ ನೋದಿ ಜನ ಗಾಬರಿಯಾಗಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ರೈಲ್ವೆ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಿದ್ದಾರೆ, ನಂತರ ರೈಲು ಮೈಸೂರಿಗೆ ಸಂಚರಿಸಿದೆ.