ಮೈಸೂರು: ಜೋಳದ ಗದ್ದೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಹೆಬ್ಬಾವನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಹೆಬ್ಬಾವನ್ನ ಸೆರೆ ಹಿಡಿಯಲಾಗಿದೆ.

ಕಾವೇರಿ ನದಿ ದಡದ ಚಂದ್ರಶೇಖರ್ ಎಂಬುವರ ಜೋಳದ ಗದ್ದೆಯಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಹಾವನ್ನ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳ ಗ್ರಾಮಸ್ಥರ ನೆರವಿನಿಂದ ಸೆರೆ ಹಿಡಿದಿದ್ದಾರೆ.