ಮೈಸೂರು: ಧರೆಗುರುಳಿದ ಬೃಹತ್ ಮರ 2 ಆಟೊ ಸಂಪೂರ್ಣ ಜಖಂ ಆಗಿರುವ ಘಟನೆ ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ.

ಕರ್ಜನ್ ಪಾರ್ಕ್ ಒಳಗಡೆ ಬೆಳೆಸಿದ್ದ ಬೃಹತ್ ಮರವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಆಟೋ ಚಾಲಕರು  ಪಾರಾಗಿದ್ದಾರೆ.

ಸಲೀಂ, ಆಸಿಫ್ ಪ್ರಾಣಾಪಾಯದಿಂದ ಪಾರಾದ ಚಾಲಕರು. ಸ್ಥಳಕ್ಕೆ ಪೊಲೀಸರು ಮತ್ತು ಪಾಲಿಕೆ ಅಭಯ ತಂಡ ಭೇಟಿ ನೀಡಿದ್ದಾರೆ.