ನಂಜನಗೂಡು : ದಿನನಿತ್ಯ ಸರ್ಕಾರಿ ಶಾಲೆಗೆ ತೆರಳುವ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಆತಂಕ ಹೆಚ್ಚಾಗಿದ್ದು, ಯಾವ ಗಳಿಗೆಯಲ್ಲಿ ಏನಾಗುತ್ತದೆ ಎಂಬ ಭಯ ಹೆದುರಾಗಿದೆ. ಇದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಬಂಕಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಥೆ ಮತ್ತು ವ್ಯಥೆಯಾಗಿದೆ.

1990-91 ರಲ್ಲಿ ಕರುನಾಡಿನ ದೊರೆಯಾಗಿದ್ದ ಎಸ್ ಬಂಗಾರಪ್ಪ ಅವಧಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಂದು ಪ್ರತಿ ಹಳ್ಳಿಯಲ್ಲಿಯೂ ಕಪ್ಪು ಹಲಗೆ ಯೋಜನೆಯ ಹೆಸರಿನಲ್ಲಿ ಸುಸಜ್ಜಿತ ಕೊಠಡಿ ನಿರ್ಮಾಣಕ್ಕೆ ಮುಂದಾಯಿತು. ನಂಜನಗೂಡಿನ ಅಂದಿನ ಶಾಸಕರಾಗಿದ್ದ ಎಂ ಮಹದೇವ್ ಅಧಿಕಾರ ಅವಧಿಯಲ್ಲಿ ಸಾಕಷ್ಟು ಶಾಲಾ ಕೊಠಡಿಗಳು ನಿರ್ಮಾಣವಾದವು.

ಆ ಸಾಲಿನಲ್ಲಿ ಗಡಿ ಗ್ರಾಮವಾಗಿರುವ ಬಂಕಹಳ್ಳಿಯ ಸರ್ಕಾರಿ ಶಾಲೆಯಲ್ಲಿಯೂ ನಿರ್ಮಾಣ ಮಾಡಿದ ಕಪ್ಪು ಹಲಗೆ ಯೋಜನೆಯ ಕೊಠಡಿ ಹಿಂದಿನ ಸ್ಥಿತಿ ನೋಡಿದರೆ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಭಯ ಎದುರಾಗಿದೆ. ಶೀತಲ ವ್ಯವಸ್ಥೆಯಿಂದ ಹಾಳಾಗಿ ಇಂದೂ ನಾಳೆಯೊ ಬೀಳುವ ದುಸ್ಥಿತಿಗೆ ತಲುಪಿದೆ. ಶಾಲೆ ಒಳಗೆ ಪ್ರವೇಶ ಮಾಡಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಯಪಡುತ್ತಿದ್ದಾರೆ.

ಒಂದರಿಂದ ಎಂಟನೇ ತರಗತಿವರೆಗೆ ಒಟ್ಟು 75 ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಯಲ್ಲಿ ದಾಖಲಾಗಿದ್ದಾರೆ. ಈ ಶಾಲೆಯಲ್ಲಿ ಇನ್ನೂ ಎರಡು ಕೊಠಡಿಗಳ ಅವಶ್ಯಕತೆ ಇದೆ ಕುಸಿಯು ಹಂತದಲ್ಲಿರುವ ಶಾಲಾ ಕೊಠಡಿಯ ನೆಲಸಮಕ್ಕೆ ಗ್ರಾಮಸ್ಥರು ಸಾಕಷ್ಟು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಯಾರೊಬ್ಬರೂ ಕೂಡ ಇದುವರೆಗೂ ದುಸ್ತಿತಿಯಲ್ಲಿರುವ ಕೊಠಡಿಯಿಂದ ಆತಂಕ ದೂರ ಮಾಡಲು ಮುಂದಾಗಿಲ್ಲ. ಯಾವ ವೇಳೆಯಲ್ಲಿ ಯಾರ ಮೇಲೆ ಬೀಳುತ್ತದೆ ಎಂಬ ಜೀವ ಭಯದಲ್ಲೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದಿನದೊಡುತ್ತಿದ್ದಾರೆ.

ಬಂಕಹಳ್ಳಿಯ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ ಏನಾದರೂ ಕೊಠಡಿ ಕುಸಿದು ಅನಾಹುತ ಸಂಭವಿಸಿದರೆ ಶಿಕ್ಷಣ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅಪಾಯದಲ್ಲಿರುವ ಕೊಠಡಿಯ ನೆಲಸಮಕ್ಕೆ ಮುಂದಾಗಬೇಕಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕಂಡು ಬಂದಿರುವ ಆತಂಕವನ್ನು ದೂರ ಮಾಡಬೇಕಿದೆ.