ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ನಗರದ ದೇವಿರಮ್ಮನಹಳ್ಳಿ ಗ್ರಾಮದ ಶ್ರೀ ಶರಣ ಸಂಗಮ ಮಠದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಮಠದ ಒಳ ಆವರಣದಲ್ಲಿ ಹೆಡೆ ಎತ್ತಿ ನಿಂತಿದೆ.
ಶರಣ ಸಂಗಮ ಮಠದಲ್ಲಿ ನಾಗರಹಾವು ಕಂಡು ಶ್ರೀ ನಾಗರಾಜೇಂದ್ರ ಸ್ವಾಮೀಜಿಗಳು ನಮಸ್ಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜು ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಶ್ರೀಗಳು, ಸ್ಥಳಕ್ಕೆ ಆಗಮಿಸಿದ ಗೋಳೂರು ಸ್ನೇಕ್ ಬಸವರಾಜು ರವರು ಚಾಣಾಕ್ಷತನದಿಂದ ನಾಗರಹಾವನ್ನು ಹಿಡಿದು ರಕ್ಷಣೆ ಮಾಡಿ, ನಾಗರಹಾವನ್ನು ಕಾಡಿಗೆ ಬಿಟ್ಟಿದ್ದಾರೆ.

