ಹೆಚ್.ಡಿ.ಕೋಟೆ: ಸಹಕಾರಿ ಬ್ಯಾಂಕುಗಳು ಉಳಿಯಬೇಕಾದರೆ ರೈತರು ಪಡೆದ ಸಾಲವನ್ನು ಸಕಾಲಕ್ಕೆ ಸಾಲವನ್ನ ಮರುಪಾವತಿ ಮಾಡಿದಾಗ ಮಾತ್ರ ಸಾಧ್ಯ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಶರಥ ತಿಳಿಸಿದರು.
ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಅಧ್ಯಕ್ಷನಾದ ಸಂದರ್ಭದಲ್ಲಿ 60 ಲಕ್ಷ ರೂಗಳ ಸಾಲವನ್ನು ನೀಡಲಾಗಿತ್ತು, ಪ್ರಸ್ತುತ ಈಗ 3.50 ಕೋಟಿ ಹಣ ಸಾಲವನ್ನು 300 ರೈತರಿಗೆ ನೀಡಲಾಗಿದೆ. ರೈತರಿಗೆ ಸರ್ಕಾರ ಮೂರು ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ರೈತರು ಇದರ ಪ್ರಯೋಜನ ಪಡೆದು ನಿಗದಿತ ಸಮಯಕ್ಕೆ ಸಾಲವನ್ನ ಮರುಪಾವತಿ ಮಾಡಬೇಕು ಎಂದರು.
ಪಟ್ಟಣದಲ್ಲಿ ಸಣ್ಣ ಜಾಗದಿಂದ ಆರಂಭವಾದ ಸಹಕಾರ ಸಂಘವು ಹಿರಿಯರ ಸಹಕಾರದಿಂದ ಇಂದು ಉತ್ತಮ ಕಟ್ಟಡ ನಿರ್ಮಾಣವಾಗಲು ಕಾರಣವಾಗಿದೆ. ನಮ್ಮ ಸಹಕಾರ ಸಂಘದ ಮೂಲಕ 300 ಕ್ಕೂ ಹೆಚ್ಚು ರೈತರಿಗೆ ಯಶಸ್ವಿನಿ ಯೋಜನೆಯಡಿ ನೊಂದಾಯಿಸಲಾಗಿದೆ. ಎಲ್ಲರ ಸಹಕಾರದಿಂದ ಸಂಘವು ಬೆಳೆದುಕೊಂಡು ಸಾಗಿದೆ ಎಂದರು.
ಪಟ್ಟಣದ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ವೆಂಕಟಾಚಲ ಮಾತನಾಡಿ ಸಹಕಾರ ಸಂಘಗಳು ರೈತನ ಬೆನ್ನುಲುಬಾಗಿ ನಿಂತಿವೆ, ಸಹಕಾರ ಸಂಘಗಳು ನಮ್ಮ ಬ್ಯಾಂಕ್ಗಳಿಗೆ ಬೆನ್ನುಲುಬಾಗಿ ನಿಂತಿವೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘದ ಮೂಲಕ ರೈತರಿಗೆ ಸಾಲ ನೀಡುವ ಬೇಡಿಕೆಯನ್ನು ಸಹಕಾರ ಸಂಘ ನೀಡಿದೆ. ಬ್ಯಾಂಕ್ ನ ಮೇಲ್ಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಹೆಚ್ಚಿನ ಸಾಲಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಚಂದ್ರು, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕುಮಾರ್, ವೈ.ಟಿ. ಮಹೇಶ್, ಎಚ್.ಆರ್. ಶ್ರೀನಿವಾಸರಾಜು, ಶಂಕರಲಿಂಗೇಗೌಡ, ಕೆ.ಜೆ. ರಾಮಕೃಷ್ಣೇಗೌಡ, ವಿರೇಂದ್ರಕುಮಾರ್, ಮಂಚನಾಯಕ, ಚಲುವರಾಜು, ಚೆನ್ನಾಜಮ್ಮ, ಶಫೀವುಲ್ಲಾ, ಲಕ್ಷ್ಮಮ್ಮ, ಮಹೇಶ್, ಶಿವರಾಜು, ರಂಗಸ್ವಾಮಿ, ಆನಂದ, ಈಶ್ವರೇಗೌಡ, ಸೊಮೇಗೌಡ, ಮಹದೇವೆಗೌಡ, ನಾಗರಾಜು, ನಾಗನಹಳ್ಳಿ ಪ್ರದೀಪ್, ಗೊಬ್ಬರದ ಅಂಗಡಿ ರಾಜೇಂದ್ರ, ಪುಟ್ಟಸ್ವಾಮಪ್ಪ, ಸಿದ್ದೇಗೌಡ, ಕಾರ್ಯದರ್ಶಿ ಶಂಭುಲಿಂಗೇಗೌಡ, ಸಹಾಯಕ ಪುನೀತ್, ಇದ್ದರು.

