ಮೈಸೂರು : ಗೂಡ್ಸ್ ವಾಹನ ಪಲ್ಟಿಯಾಗಿ 7 ವಿದ್ಯಾರ್ಥಿಗೆ ಗಾಯಗಳಾಗಿರುವ ಘಟನೆ ಹುಣಸೂರು ತಾಲ್ಲೂಕು ಸೋಮನಹಳ್ಳಿ ಬಳಿ ನಡೆದಿದೆ.
ಹುಣಸೂರು ಬನ್ನಿಕುಪ್ಪೆ ಫ್ರೌಢಶಾಲೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನವಾಗಿದೆ. ಮೂಕನಹಳ್ಳಿ ಗ್ರಾಮದ ಪಾಲಾಕ್ಷ, ವಿದ್ಯಾಚರಣ, ಅಪ್ಪು, ನಿತಿನ್, ಚಂದ್ರಶೇಖರ್, ಮನುಕುಮಾರ್ ಎಮ್ಮೆಕೊಪ್ಪಲಿನ ಸಂಜಯ್ ಗಾಯಗೊಂಡವರು.
ವಿದ್ಯಾರ್ಥಿ ಪಾಲಾಕ್ಷಗೆ ಗಂಭೀರ ಗಾಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಬಸ್ ತಡವಾಗಿ ಬಂದ ಹಿನ್ನೆಲೆ ಅದೇ ಮಾರ್ಗದಲ್ಲಿ ಬಂದ ಹಾಲಿನ ವಾಹನಕ್ಕೆ ವಿದ್ಯಾರ್ಥಿಗಳು ಹತ್ತಿದರು.
ಮೈಸೂರು ಹುಣಸೂರು ಹೆದ್ದಾರಿಯ ಸೋಮನಹಳ್ಳಿ ಬಳಿ ಆಟೋ ಪಲ್ಟಿಯಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

