ಮೈಸೂರು: 6 ವರ್ಷ ಯತ್ನಾಳ್ ಉಚ್ಚಟಾನೆ ವಿಚಾರವಾಗಿ ಮೈಸೂರಿನಲ್ಲಿ ಛಲವಾದಿ ನಾರಾಯಣ್ ಸ್ವಾಮಿ ಹೇಳಿಕೆ ನೀಡಿದ್ದು, ಯತ್ನಾಳ್ ಕೂಡ ನಮ್ಮ ನಾಯಕರು, ನಾನು ಸಾಕಷ್ಟು ಬಾರಿ ಹೇಳಿದ್ದೆ ಸ್ವಲ್ಪ ತಿದ್ದಿಕೊಳ್ಳಿ ನಿಮಗೆ ಉತ್ತಮ ಭವಿಷ್ಯವಿದೇ ಉತ್ತಮ ನಾಯಕರು ಅಂತ. ಹೈಕಮಾಂಡ್ ನೋಟಿಸ್ ಕೊಟ್ರು ಯತ್ನಾಳ್ ಉತ್ತರ ಕೊಟ್ಟಿಲ್ಲ, ಹೀಗಾಗಿ ಹೈಕಮಾಂಡ್ ಕ್ರಮ ತೆಗೆದುಕೊಂಡಿದೆ ಎಂದರು.
ಈಗಲೂ ಇನ್ನೂ ಶಿವರಾಂ ಹೆಬ್ಬಾರ್ ಸೇರಿದಂತೆ ಅನೇಕರು ಪಕ್ಷದ ವಿರುದ್ದ ಮಾತನಾಡುತ್ತಿದ್ದಾರೆ. ಮುಂದಿನ ಸರದಿ ಅವರದೇ ಇರಬಹುದು, ಪಕ್ಷದ ವಿರುದ್ಧ ನಡೆಯುವವರಿಗೆ ಇದು ಎಚ್ಚರಿಕೆ ಗಂಟೆ ಎಂದರು.
ಆ ಜೀ ಈ ಜೀ ಗಳಿಂದ ಯತ್ನಾಳ್ ರಾಜಕೀಯ ಭವಿಷ್ಯ ಹಾಳಾಯ್ತು ಎಂಬ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಗೆ ಏನು ಹೇಳುವ ನೈತಿಕ ಹಕ್ಕಿಲ್ಲ, ಅವರ ತೂತುಗಳೇ ನೂರಾರಿದೆ ಅದನ್ನು ಮೊದಲು ಮುಚ್ಚಿಕೊಳಲ್ಲಿ ಎಂದರು.
ಸತೀಶ್ ಜಾರಕಿಹೊಳಿ ಸಿಎಂ ಆಗಲು ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ಜಿಟಿ ದೇವೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾಕೆ ಭೇಟಿ ಮಾಡಿದ್ದಾರೆ ಗೊತ್ತಿಲ್ಲ, ಕಾಂಗ್ರೆಸ್ ನಲ್ಲಿ 136 ಸೀಟುಗಳಿವೆ. ಅಂತಹದರಲ್ಲಿ ಅಲ್ಲಿ ಸಿಎಂ ಆಗಲು ಏನು ಕೇಳಲು ಸಾಧ್ಯ. ಸತೀಶ್ ಜಾರಕಿಹೊಳಿ ಪಕ್ಷದ ಒಡೆದು ಸಿಎಂ ಆಗ್ತಾರಾ?, ಎಂದು ಮೈಸೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

