ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಮತ್ತು ಬಿ ಎಂ ಸಿ ಕೇಂದ್ರಕ್ಕೆ 50 ವರ್ಷ ತುಂಬಿದೆ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮದ ಶ್ರೀ ಮಹದೇಶ್ವರ ಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಆರ್ ಚೆಲುವರಾಜ್ ಜ್ಯೋತಿ ಬೆಳಗಿಸಿ ಡಾ.ವರ್ಗೀಸ್ ಕುರಿಯನ್ ರವರ ಭಾವಚಿತ್ರಕ್ಕೆ ಉತ್ಪಾದನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹದಿನಾರು ಹಾಲು ಉತ್ಪಾದಕರ ಸಹಕಾರ ಸಂಘ ಇಂದಿಗೆ ಐವತ್ತು ವರ್ಷ ಪೂರೈಸಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ರೈತರು ಹಾಲು ಉತ್ಪಾದನೆ ಮಾಡಬೇಕು. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಹೆಮ್ಮರವಾಗಿ ಹೈನುಗಾರಿಕೆ ಬೆಳೆಯುತ್ತಿದೆ.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ.ಆದರೆ, ಸಹಕಾರ ಸಂಘದಲ್ಲಿ ರೈತರು ಉತ್ಪತ್ತಿ ಮಾಡುತ್ತಿರುವ ಹಾಲಿನಿಂದ ಮೈಸೂರು ಜಿಲ್ಲೆಯಲ್ಲಿ 10 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ 4 ಲಕ್ಷ ಲೀಟರ್ ಮಾರಾಟ ಆಗುತ್ತಿದೆ. ಇನ್ನೂಳಿದ ಹಾಲನ್ನು ಬೇರೆ ಜಿಲ್ಲೆ ಮತ್ತು ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಅಲ್ಲದೇ ಶಾಲಾ ಮಕ್ಕಳಿಗೂ ಅನುಕೂಲವಾಗುವಂತೆ ಹಾಲಿನ ಪೌಡರ್ ಮಾಡಲಾಗುತ್ತಿದೆ. ಒಕ್ಕೂಟದಿಂದ ರೈತರಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಲಾಗುತ್ತಿದೆ.

ರೈತರಿಗೆ ವಿಮಾ ಮಾಡಲಾಗುತ್ತಿದೆ. ಅದರಲ್ಲಿ 65 ಸಾವಿರ ಜನ ಷೇರುದಾರರು ಇದ್ದಾರೆ. 21 ಸಾವಿರ ಜನ ಉಪಯೋಗ ಮಾಡಿಕೊಂಡಿದ್ದಾರೆ. ಇನ್ನೂಳಿದ ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಮುಂದಿನ ತಿಂಗಳಲ್ಲಿ ಹಸುಗಳಿಗೆ ರಿಯಾಯಿತಿ ದರದಲ್ಲಿ ಮ್ಯಾಟ್ ಕೊಡಲು ನಿರ್ಧಾರ ಮಾಡಿದ್ದೇವೆ. ರಾಸುಗಳಿಗೆ ವಿಮಾ ಮಾಡಿಸುವುದನ್ನು ಮರೆಯಬಾರದು. ವಿಮೆ ಮಾಡಿಸುವುದರಿಂದ ಹಸುಗಳು ಮರಣ ಹೊಂದಿದ ಸಂದರ್ಭದಲ್ಲಿ ಸಹಾಯವಾಗಲಿದೆ.

ರೈತರಿಗೆ ಹೊರೆಯಾಗಬಾರದು ಎಂದು ಇನ್ಸೂರೆನ್ಸ್ ಮಾಡಲಾಗಿದೆ. ಗುಣಮಟ್ಟದ ಹಾಲನ್ನು ಕೊಡುವ ಮೂಲಕ ಸಹಕಾರ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ತಿಳಿಸಿ, ಸಹಕಾರ ಸಂಘಕ್ಕೆ ಐವತ್ತು ಸಾವಿರ ಧನ ಸಹಾಯ ಮಾಡಿದರು. ನಂತರ ಮೈಮುಲ್ ಮಾಜಿ ಅಧ್ಯಕ್ಷ ಕೆ.ಜಿ ಮಹೇಶ್ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಹಾಲು ಒಕ್ಕೂಟದ ಸಂದರ್ಭದಲ್ಲಿ ನಾಲ್ಕು ಲಕ್ಷ ಲೀಟರ್ ಮಾತ್ರ ಹಾಲು ಬರುತ್ತಿತ್ತು ಈಗ ಮೈಸೂರು ಹಾಲು ಒಕ್ಕೂಟದಲ್ಲಿ 10 ಲಕ್ಷ ಲೀಟರ್ ಹಾಲು ಬರುತ್ತಿದೆ. ನಮ್ಮ ಮೈಸೂರು ಜಿಲ್ಲೆಯಿಂದಲೇ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಸಹಕಾರ ಸಂಘಗಳನ್ನು ನಡೆಸುವುದು ಅಷ್ಟು ಸುಲಭವಲ್ಲ. ತಿಂಗಳಲ್ಲಿ ಮೂರು ಬಾರಿ ರೈತರಿಗೆ ಹಣವನ್ನು ಜಮೆ ಮಾಡಲಾಗುತ್ತಿದೆ. ರೈತರು ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಒಕ್ಕೂಟದ ನಿರ್ದೇಶಕ ಸದಾನಂದ ಮಾತನಾಡಿ, ರೈತರಿಗೆ ಮತ್ತು ರಾಸುಗಳಿಗೆ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಇತ್ತೀಚೆಗೆ ನಡೆದ ಎಂಡಿಸಿಸಿ ಚುನಾವಣೆಯ ಪ್ರತಿಷ್ಠೆಯ ಕಣವಾಗಿತ್ತು. ಸಹಕಾರ ಸಂಘದಲ್ಲೂ ಕೂಡ ರಾಜಕಾರಣ ನಡೆಯುತ್ತಿದೆ. ಪ್ರತಿ ಚುನಾವಣೆಗಳು ಪ್ರತಿಷ್ಠೆ ಮತ್ತು ಹಣದ ರೂಪವನ್ನು ಪಡೆದುಕೊಂಡಿವೆ. ಇವರ ಪೈಪೋಟಿಯಿಂದ ಚುನಾವಣೆ ನಡೆಯುತ್ತಿದ್ದು ಸಹಕಾರ ಸಂಘದಲ್ಲೂ ರಾಜಕೀಯ ಬೆಳವಣಿಗೆ ಕಂಡಿದೆ. ಶೇಕಡ 40ರಷ್ಟು ಜನ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡು ಸರ್ಕಾರ ಮತ್ತು ಸಹಕಾರ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಹಕಾರ ಸಂಘದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.

ಇನ್ನೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಆರ್.ಚಲುವರಾಜ್, ಮಾಜಿ ಅಧ್ಯಕ್ಷ ಕೆ.ಜಿ ಮಹೇಶ್, ಹದಿನಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಸಿ ಶಿವಪ್ಪ, ಒಕ್ಕೂಟದ ನಿರ್ದೇಶಕರಾದ ನೀಲಾಂಬಿಕೆ, ಸದಾನಂದ, ಉಮಾಶಂಕರ್,

ಓಂ ಪ್ರಕಾಶ್, ಲೀಲಾ ನಾಗರಾಜು, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯ್ಕ, ವ್ಯವಸ್ಥಾಪಕ ಕರಿಬಸವರಾಜು, ಉಪ ವ್ಯವಸ್ಥಾಪಕ ಸಂತೋಷ್, ಸಹಾಯಕ ವ್ಯವಸ್ಥಾಪಕರಾದ ಅಕ್ಷಯ್ ಕುಮಾರ್, ಕೆ ಅಶ್ವಿನಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸಣ್ಣತಾಯಮ್ಮ, ನಾಡಗೌಡ ಸಿದ್ದಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜು, ಜ್ಯೋತಿ, ಸೋಮಣ್ಣ, ರವಿಕುಮಾರ್, ಮಾಜಿ ಜಿಪಂ ಸದಸ್ಯ ನಂಜಪ್ಪ, ಡೈರಿ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿರೂಪಾಕ್ಷ, ಸಹಾಯಕರಾದ ನಾಗರಾಜು , ಗುರುಪ್ರಸಾದ್ ಚನ್ನಬಸವಣ್ಣ, ನಿರ್ದೇಶಕರಾದ ಮಹದೇವಸ್ವಾಮಿ, ಉಮೇಶ್, ನನ್ನೇಶ್ ಮಹದೇವಸ್ವಾಮಿ, ಪಿಎಸ್ ನಂಜುಂಡಸ್ವಾಮಿ, ಶಿವಲಿಂಗ, ಮಲ್ಲೇಗೌಡ, ರೇಣುಕಾದೇವಿ, ರಾಜಮ್ಮ, ಮಹದೇವಮ್ಮ, ನಿಂಗಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.