ನಂಜನಗೂಡು : ತಾಲ್ಲೂಕಿನ ಹದಿನಾರು ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಾಂಗ್ರೆಸ್ ಮತ್ತು ಅವರ ನಾಯಕಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಗಳ ಕರಾಳ ದಿನಗಳ ಕಹಿ ಸತ್ಯವನ್ನು ರಾಜ್ಯದ ಜನರ ಪ್ರತಿ ಮನೆ ಮನೆಗಳಿಗೆ ತಲುಪಿಸುವ ಸಲುವಾಗಿ ಇಂದು ಕಾರ್ಯಕ್ರಮವನ್ನು ಹದಿನಾರು ಗ್ರಾಮದ ಮಂತ್ರಿ ಮಹದೇವಪ್ಪ ಸ್ವಗ್ರಾಮದಿಂದಲೇ ಪ್ರಾರಂಭ ಮಾಡಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಮಾಜಿ ಸಚಿವ ಎನ್ ಮಹೇಶ್, ಮಾಜಿ ಸಂಸದ ಪ್ರತಾಪ್ ಸಿಂಹ ಮಾಜಿ ಶಾಸಕರಾದ ಎಸ್.ಬಾಲರಾಜು, ಹರ್ಷವರ್ಧನ್ ಉಪಸ್ಥಿತಿಯಲ್ಲಿ ಕನ್ನಡಾಂಬೆ, ಸಂವಿಧಾನ ಪೀಠಿಕೆ, ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದೀಪ ಬೆಳಗಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎನ್, ಮಹೇಶ್, ತುರ್ತು ಪರಿಸ್ಥಿತಿಗೆ ಐವತ್ತು ವರ್ಷ ತುಂಬುತ್ತಿದೆ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ಏರಿದ ಈ ತುರ್ತು ಪರಿಸ್ಥಿತಿಯಿಂದ ದೇಶಕ್ಕೆ ಲಾಭವಾಗಲಿಲ್ಲ. ಬದಲಾಗಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸಾಕಷ್ಟು ಲಾಭಗಳಾದವು ಅಧಿಕಾರ ದಾಹ ಅನ್ನೋದು ಇಂದಿರಾ ಗಾಂಧಿಯಿಂದ ಹಿಡಿದು ಈಗಿನ ರಾಹುಲ್ ಗಾಂಧಿ ವರೆಗೂ ಇದೆ.
ಅವರ ಡಿ ಎನ್ ಎ ಯಲ್ಲೇ ಇದು ಹುಟ್ಟಿದಾಗಿನಿಂದಲೇ ಬಂದಿದೆ ಅಧಿಕಾರದ ಆಸೆಗಾಗಿ ತುರ್ತು ಪರಿಸ್ಥಿತಿ ಏರಿಕೆ ಮಾಡಿದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಕುಟುಂಬದ ಮೇಲೆ ಮಾತಿನುದ್ದಕ್ಕೂ ಮಾಜಿ ಸಚಿವ ಎನ್ ಮಹೇಶ್ ವಾಗ್ದಾಳಿ ನಡೆಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಈ ದೇಶದ ಸಂವಿಧಾನ ಉಳಿದಿರೋದು ಆರ್ಎಸ್ಎಸ್ನಿಂದ, ಆರ್ಎಸ್ಎಸ್ ಇರದೇ ಇದ್ದರೇ ಸಂವಿಧಾನ ಉಳಿಯುತ್ತಿರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಆರ್ ಎಸ್ ಎಸ್ ಪಾತ್ರ ಸಾಕಷ್ಟಿದೆ, ಸಿಎಂ ಸಿದ್ದರಾಮಯ್ಯ ತುರ್ತು ಪರಿಸ್ಥಿತಿಯ ಅವತ್ತಿನ ದಿನಗಳಲ್ಲಿ ಏನ್ ಮಾಡುತ್ತಿದ್ರೂ, ಕೇವಲ ಶೋಕಿವಾಲನಾಗಿ ಇದ್ದರಷ್ಟೇ ಅಂತ ಸಿಎಂ ಸಿದ್ದು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜೈಲುವಾಸ ಅನುಭವಿಸಿದ ಹಲವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಾಲರಾಜು, ಹರ್ಷವರ್ಧನ್, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಪ್ಪಗೌಡ, ಜಿಲ್ಲಾ ಬಿಜೆಪಿ ಗ್ರಾಮಾಂತರ ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್,
ಮಂಡಲ ಅಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸದನಾಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರು, ಮಹಿಳಾ ಮೋರ್ಚಾದ ಪ್ರಫುಲ್ಲಾ ಮಲ್ಲಾಡಿ, ಹಿರಿಯ ಮುಖಂಡರಾದ ಪುಟ್ಟಬುದ್ದಿ ಸೇರಿದಂತೆ ಇತರೇ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

